Site icon PowerTV

ಕಾವೇರಿಗಾಗಿ ಮಳವಳ್ಳಿಯಲ್ಲಿ ರಕ್ತ ಚಳವಳಿ!

ಮಂಡ್ಯ: ತಮಿಳುನಾಡಿಗೆ ಮತ್ತೆ ನೀರು ಬಿಡುಗಡೆ ಹಿನ್ನೆಲೆ ಮಂಡ್ಯದ ಮಳವಳ್ಳಿಯಲ್ಲಿ ರಕ್ತ ಚಳುವಳಿ ನಡೆಸಿದ್ದಾರೆ.

ಮಾಜಿ ಶಾಸಕ ಡಾ.ಅನ್ನದಾನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಸರ್ಕಾರ, ಕಾವೇರಿ ಪ್ರಾಧಿಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದು ಸಿರಂಜ್ ಮೂಲಕ ರಕ್ತ ಸಂಗ್ರಹಿಸಿ ಪ್ರತಿಭಟನಾಕಾರರು ಕಾವೇರಿ ನದಿಗೆ ಸುರಿದಿದ್ದಾರೆ.

ಇದನ್ನೂ ಓದಿ:  ಕಾವೇರಿಗೆ ಪೂಜೆ ಸಲ್ಲಿಸಿದ ನಟ ಅಭಿಷೇಕ್​ ಮತ್ತು ಅವಿವಾ!

ಮಳವಳ್ಳಿಯ ಅನಂತ್ ರಾಮ್ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿ ರಕ್ತ ಸಂಗ್ರಹಿಸಿ ಕಾವೇರಿ ನದಿವರೆಗೆ ಬೈಕ್ ರ್ಯಾಲಿ ನಡೆಸಿದ್ದಾರೆ. ಬಳಿಕ ಸಿರಿಂಜ್​ ಮೂಲಕ ಸಂಗ್ರಹಿಸಿದ ರಕ್ತವನ್ನು ನದಿಗೆ ಸುರಿಯುವ ಮೂಲಕ ಆಕ್ರೋಶ ಹೊರಹಾಕಿ ರಕ್ತ ಕೊಟ್ಟೆವು ನೀರು ಕೊಡಲ್ಲ ಎಂದು ಘೋಷಣೆ ಕೂಗಿ ಕಿಡಿಕಾರಿದರು.

ಆ ಮೂಲಕ ತಕ್ಷಣ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಬೇಕು. ಪ್ರಾಧಿಕಾರವನ್ನ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.

Exit mobile version