Site icon PowerTV

ಕಾವೇರಿಗೆ ಪೂಜೆ ಸಲ್ಲಿಸಿದ ನಟ ಅಭಿಷೇಕ್​ ಮತ್ತು ಅವಿವಾ!

ಮಡಿಕೇರಿ : ಕಾವೇರಿ ವಿವಾದ ಶೀಘ್ರ ಬಗೆಹರಿಯಲು ನಟ ಅಭಿಷೇಕ್​ ಅಂಬರೀಷ್​ ತಮ್ಮ ಪತ್ನಿ ಅವಿವಾ ದಂಪತಿ ಕೊಡಗಿನ ತಲಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ್ದಾರೆ. ಕಾವೇರಿ ಉಗಮಸ್ಥಾನವಾದ ತಲಕಾವೇರಿಗೆ ಭೇಟಿ ನೀಡಿದ ನವ ದಂಪತಿ ದೇವರ ದರ್ಶನ ಪಡೆದಿದ್ದಾರೆ.

ಕಾವೇರಿ ವಿವಾದ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆದಷ್ಟು ಬೇಗ ವಿವಾದ ಬಗೆಹರಿಯಲಿ ಎಂದು ನಟ ಅಭಿಷೇಕ್​ ಮತ್ತು ಅವಿವಾ ಭಾಗಮಂಡಲದಲ್ಲಿರುವ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ವಿಶೇಷ ಪೂಜೆ ನೆರವೇರಿದ್ದಾರೆ. ರಾಜ್ಯದಲ್ಲಿ ಬರಗಾಲ ಹೆಚ್ಚಾಗಿದ್ದು ಮಳೆ ಬರಲಿ ಜೊತೆಗೆ ಕಾವೇರಿ ವಿವಾದ ಬಗೆಹರಿಯಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.  ಇದೇ ವೇಳೆ ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಅಂಬರೀಷ್ ಅವರು ಹೆಗಲಮೇಲೆ ಹಸಿರು ಟವೆಲ್ ಹಾಕಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಕೇರಳ ಈಗ ನಿಫಾ ಮುಕ್ತ; 4 ಸೋಂಕಿತರೂ ಗುಣಮುಖ!

ಸಂಸದೇ ಸುಮಲತಾ ಅಂಬರೀಷ್​ ಈ ಕುರಿತು ತಮ್ಮ ಎಕ್ಸ್​ ಸಾಮಾಜಿಕ ಜಾಲತಾಣದಲ್ಲಿ ಮಗ ಮತ್ತು ಸೊಸೆ ತಲಕಾವೇರಿಗೆ ಭೇಟಿ ನೀಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಸಂಸದೆ ಸುಮಲತಾ ಅವರ ಪೋಸ್ಟ್​ ಕಂಡು ಅನೇಕರು ಕಾಮೆಂಟ್​ ಬರೆದಿದ್ದಾರೆ.

Exit mobile version