Site icon PowerTV

ಸೆಲ್ಫಿ ಕಾಟ ಇಲ್ಲ ಅಂದ್ರೆ ನಟರು ಹೋರಾಟಕ್ಕೆ ಬರುತ್ತಾರೆ : ನಟ ದೊಡ್ಡಣ್ಣ

ಶಿವಮೊಗ್ಗ : ಸೆಲ್ಫಿ ಕಾಟ ಇಲ್ಲ ಅಂದ್ರೆ ನಮ್ಮವರು ಎಲ್ಲರೂ ಹೋರಾಟಕ್ಕೆ ಬರುತ್ತಾರೆ. ಸಿನಿಮಾ ನಟ ಎಂಬ ಅಹಂಕಾರ ಯಾರಿಗೂ ಇಲ್ಲ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ. 

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಕಾವೇರಿಗಾಗಿ ಹೋರಾಟಕ್ಕೆ ಬರಲು ಹಿಂಜರಿಕೆ ಇಲ್ಲ. ಚಲನಚಿತ್ರದವರಿಗೆ ಸೆಲ್ಫಿ ಕಾಟ ಇದೆ ಎಂದು ತಿಳಿಸಿದ್ದಾರೆ.

ಕಾವೇರಿ ನಮ್ಮದು.. ರಕ್ತ ಬೇಕಾದರೂ ಕೊಡುತ್ತೇವೆ, ಕಾವೇರಿ ನೀರು ಕೊಡುವುದಿಲ್ಲ. ನಮ್ಮ ಸಹಕಾರ ಒಳ್ಳೆಯದಕ್ಕೆ, ಕಾವೇರಿ ನಮ್ಮವಳು. ಸರಿಯಾಗಿದ್ದ ಜಾಗದಲ್ಲಿ ನಾನು ದೇವರಾಣೆ ಕುಳಿತುಕೊಳ್ಳುತ್ತೇನೆ. ನಾವೇನು ಕಾವೇರಿ‌ ಕುಡಿಯುತ್ತಿಲ್ವಾ? ನಮ್ಮ ಮಕ್ಕಳು ‌ಕಾವೇರಿ‌ ಕುಡಿಯುತ್ತಿಲ್ವಾ? ಎಂದು ಪ್ರಶ್ನಿಸಿದ್ದಾರೆ.

ಹೊರಾಟಕ್ಕೆ ನಾವು ಬರಲು ಸಿದ್ಧ

ಕಾವೇರಿ‌ ನೀರಿಗೆ ನಾವೆಷ್ಟು ಕಷ್ಟ ಪಡುತ್ತಿದ್ದೇವೆ. ಮಳೆ ಆಗಬೇಕಿದೆ. ಮಡಿಕೇರಿಗೆ ಮಳೆಯಾದರೆ ಕನ್ನಂಬಾಡಿ ತುಂಬೋದು. ಹೀಗಾಗಿ, ಕಾವೇರಿ ಹೊರಾಟಕ್ಕೆ ನಾವು ಬರಲು ಸಿದ್ಧ ಎಂದರು. ಆ ಮೂಲಕ ನಟ ಶಿವರಾಜ್ ಕುಮಾರ್ ಹೇಳಿದಂತೆಯೇ ಸೆಲ್ಫಿ ಕಾಟದ ಬಗ್ಗೆ ದೊಡ್ಡಣ್ಣ ಮಾತನಾಡಿದ್ದಾರೆ.

Exit mobile version