Site icon PowerTV

ಬಂದ್ ಮಾಡುವುದಕ್ಕೆ ಅವಕಾಶ ಇಲ್ಲ : ಸಿದ್ದರಾಮಯ್ಯ

ಬೆಂಗಳೂರು : ಪ್ರತಿಭಟನೆ ಮಾಡಲು ನಮ್ಮ ತೊಂದರೆ ಇಲ್ಲ. ಆದರೆ, ಬಂದ್ ಮಾಡುವುದಕ್ಕೆ ಅವಕಾಶ ಇಲ್ಲ. ಫ್ರೀಡಂ ಪಾರ್ಕ್​ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ಇದೆ, ಬೇರೆಲ್ಲೂ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೂ ಕೂಡಾ ಬಂದ್ ಮಾಡಬೇಡಿ, ಮೆರವಣಿಗೆ ಮಾಡಬೇಡಿ ಅಂತ ಹೇಳಿದ್ದೇವೆ. ಆದರೂ, ಅವರು ಬಂದ್​ಗೆ ಕರೆಕೊಟ್ಟಿದ್ದಾರೆ ಎಂದು ತಿಳಿಸಿದರು.

ಸಿಂಗಾಪುರಕ್ಕೆ ಅಕ್ಕಿ ಕೊಡುತ್ತಿರುವ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಗರಂ ಆದರು. ಕೇಂದ್ರ ಸರ್ಕಾರ ಅಕ್ಕಿ ಇಟ್ಟುಕೊಂಡು ಕೊಡಲಿಲ್ಲ. ಬಡವರಿಗೆ ಅಕ್ಕಿ ಕೊಡಲಿಲ್ಲ. ಪುಕ್ಕಟೆ ಅಕ್ಕಿ ಕೊಡಿ ಅಂತ ಕೇಳಿಲ್ಲ ನಾವು, ದುಡ್ಡು ಕೊಡ್ತೀವಿ ಕೊಡಿ ಅಂದರೂ ಕೊಡಲಿಲ್ಲ ಎಂದು ಕಿಡಿಕಾರಿದರು.

ಅಕ್ಕಿ ಕೊಡುತ್ತೇವೆ ಅಂತ ಒಪ್ಪಿಕೊಂಡು ಕೇಂದ್ರ ಸರ್ಕಾರ ಕೊಡಲ್ಲ. ಅಂತು ಅಕ್ಕಿ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಬಡವರ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲು ಬಿಜೆಪಿಗೆ ಆಸಕ್ತಿ ಇಲ್ಲ ಎಂದು ಸಿದ್ದರಾಮಯ್ಯ ಅವರು ಕಾವೇರಿ ವಿಚಾರವನ್ನು ಡೈವರ್ಟ್ ಮಾಡಿದರು.

Exit mobile version