Site icon PowerTV

ಕಾವೇರಿ ಹೋರಾಟ ಇದೊಂದು ದುರಂತ!: ನಟ ಲೂಸ್​ ಮಾದ ಯೋಗಿ

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಇಂದು ಅಖಂಡ ಕರ್ನಾಟಕ ಬಂದ್​ಗೆ ಕರೆ ನೀಡಿದ್ದು ಇದಕ್ಕೆ ಕನ್ನಡ ಚಿತ್ರರಂಗದ ಕಲಾವಿದರು  ಬೀದಿಗಿಳಿದು ಹೋರಾಟ ನಡೆಸಲು ಸಿದ್ದತೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಲೂಸ್​ ಮಾದ ಖ್ಯಾತಿಯ ನಟ ಯೋಗಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ನಾಡು, ನಮ್ಮ ನೀರಿಗಾಗಿ ಹೋರಾಟಕ್ಕೆ ನಾವು ಸದಾ ಸಿದ್ದ, ನನ್ನ ಜೊತೆ ನನ್ನ ಕಲಾವಿದ ಸಹೋದ್ಯೋಗಿಗಳು ಬಾಗವಹಿಸಲು ಬರಲಿದ್ದಾರೆ. ಇದಕ್ಕೆ ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು ಇನ್ನು ಕೆಲವೇ ನಿಮಿಷಗಳಲ್ಲಿ ಹೋರಾಟ ಆರಂಭವಾಗಲಿದೆ ಎಂದರು.

ಇದನ್ನೂ ಓದಿ: ರಾಜಧಾನಿಯಲ್ಲಿ ಜೋರಾಯ್ತು ಕಾವೇರಿ ಕಾವು!

ಕಾವೇರಿ ಗಲಾಟೆ ಇದೊಂದು ದುರಂತ ನಾನು ಚಕ್ಕವನಿದ್ದಾಗಿನಿಂದಲೂ ಕಾವೇರಿ ಹೋರಾಟದಲ್ಲಿ ಭಾಗಿಯಾಗುತ್ತಿದ್ದೇನೆ. ಇದು 3 ಬಾರಿಗೆ ಹೋರಾಟಕ್ಕೆ ಬರುತ್ತಿರುವುದು. ಯಾವಾಗ ಸರಿಹೋಗುತ್ತೊ ಗೊತ್ತಿಲ್ಲ,  ಇದಕ್ಕೆ ನಮ್ಮ ಸರ್ಕಾರವು ಕೇಂದ್ರ ಸರ್ಕಾರದ ಜೊತೆಗೂಡಿ ಸುಪ್ರೀಂ ಕೋರ್ಟ್​ಗೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.

Exit mobile version