Site icon PowerTV

ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ ಮುಂದುವರೆದ ಪದಕಗಳ ಬೇಟೆ!

ಚೀನಾ : ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ.

ಸರಬ್ಜೋತ್ ಸಿಂಗ್, ಶಿವ ನರ್ವಾಲ್ ಮತ್ತು ಅರ್ಜುನ್ ಸಿಂಗ್ ಚೀಮಾ ಅವರ ಪುರುಷರ ತಂಡ 10 ಮೀಟರ್ ಏರ್ ಪಿಸ್ತೂಲ್​ನಲ್ಲಿ ಒಟ್ಟು 1734 ಸ್ಕೋರ್ ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಕೇವಲ ಒಂದು ಅಂಕಗಳ ಅಂತರದಲ್ಲಿ ಚೀನಾವನ್ನು ಸೋಲಿಸುವ ಮೂಲಕ ಭಾರತಕ್ಕೆ ಮತ್ತೊಂದು ಬಂಗಾರದ ಪದಕ ತಂದುಕೊಟ್ಟರು.

ಇದನ್ನೂ ಓದಿ: ಸಂಸದರ ವಿರುದ್ದ ಕರವೇ ಮಹಿಳಾ ಘಟಕದಿಂದ ಪ್ರತಿಭಟನಾ ರ್ಯಾಲಿ!

ಈ ಮೂಲಕ ಪ್ರಸಕ್ತ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ 24ನೇ ಪದಕ ಹಾಗೂ ಶೂಟಿಂಗ್ ಕ್ರೀಡೆಯಲ್ಲಿ ನಾಲ್ಕನೇ ಚಿನ್ನದ ಪದಕ ಲಭಿಸಿದೆ. ಮಹಿಳೆಯರ 60 ಕೆಜಿ ವಿಭಾಗದ ವುಶು ಸ್ಪರ್ಧೆಯಲ್ಲಿ ರೋಶಿಬಿನಾ ದೇವಿ ಬೆಳ್ಳಿ ಪದಕ ಗೆದ್ದಿದ್ದಾರೆ.

Exit mobile version