Site icon PowerTV

ಬಂದ್‌ ಹೆಸರಲ್ಲಿ ರಾಜಕೀಯ ಬೇಡ : ಸಚಿವ ಜಿ.ಪರಮೇಶ್ವರ್​

ಬೆಂಗಳೂರು : ನಾಳೆ ಕರ್ನಾಟಕ ಬಂದ್ ಮಾಡುವ ಅವಶ್ಯಕತೆಯಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂಘಟನೆಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡುತ್ತಿದ್ದಾರೋ ಅಥವಾ ಬೇರೆಯವರು ಒತ್ತಡ ಹೇರುತ್ತಿದ್ದಾರೋ ಗೊತ್ತಿಲ್ಲ. ಆದ್ರೆ ನ್ಯಾಯಾಲಯ ಬಂದ್ ಮಾಡಬಾರದು ಎಂದಿದೆ. ಸಂಘಟನೆಗಳಿಗೆ ನಾವು ಮನವಿ ಮಾಡಿದ್ದೇವೆ ಬಂದ್ ಮಾಡಬೇಡಿ ಎಂದು. ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕೆ ಬೆಂಬಲ ಕೊಡುತ್ತಿದ್ದಾರೆ.

ಇದನ್ನೂ ಓದಿ : ಹಸಿರು ಕ್ರಾಂತಿ ರೂವಾರಿ ಸ್ವಾಮಿನಾಥನ್ ಇನ್ನಿಲ್ಲ!

ಇಂತಹ ಸಂದರ್ಭದಲ್ಲಿ ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಬಾರದು. ಬಲವಂತದ ಬಂದ್ ಮಾಡುವಂತಿಲ್ಲ ಎಂದು ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ. ಮೊನ್ನೆ 1 ದಿನದ ಬಂದ್‌ನಿಂದಾಗಿ 1,500 ರಿಂದ 2,000 ಕೋಟಿ ನಷ್ಟವಾಗಿದೆ. ಇಂದು ಸರ್ಕಾರಿ ರಜೆ ಈ ಮಧ್ಯೆ ನಾಳೆಯು ಬಂದ್ ಮಾಡಿದ್ರೆ ಮತ್ತಷ್ಟು ಸಮಸ್ಯೆ ಆಗಲಿದೆ.

Exit mobile version