Site icon PowerTV

ನಿತ್ಯ ಮೆನನ್ ವಿರುದ್ದ ಸುಳ್ಳು ಸುದ್ದಿ ಪೋಸ್ಟ್​ : ನಿತ್ಯ ಗರಂ!

ಚೆನ್ನೈ : ನಟಿ ನಿತ್ಯಾ ಮೆನನ್​ ಇದೀಗ ತಮ್ಮ ವಿರುದ್ಧ ಹರಿದಾಡುತ್ತಿರುವ ಸುಳ್ಳು ಸುದ್ದಿಯೊಂದರ ವಿರುದ್ಧ​ ಗರಂ ಆಗಿದ್ದು, ಸ್ಪಷ್ಟನೆ ನೀಡಿದ್ದಾರೆ.

ತೆಲುಗು ಇಂಡಸ್ಟ್ರಿಯಿಂದ ನಾನು ಯಾವುದೇ ಸಮಸ್ಯೆಯನ್ನು ಎಂದಿಗೂ ಎದುರಿಸಿಲ್ಲ. ಆದರೆ, ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ನಾನು ತುಂಬಾ ಸಮಸ್ಯೆಗಳನ್ನು ಎದುರಿಸಿದ್ದೇನೆ. ಸಿನಿಮಾವೊಂದರ ಶೂಟಿಂಗ್​ ವೇಳೆ ನಟನೊಬ್ಬ ಲೈಂಗಿಕ ಕಿರುಕುಳ ನೀಡಿದರು ಎಂದು ನಿತ್ಯಾ ಮೆನನ್​ ಹೇಳಿಕೊಂಡಿದ್ದಾರೆ.

ಇದನ್ನೂಓದಿ: ಕರ್ನಾಟಕ ಬಂದ್​ ಗೆ ತಮಿಳು ಸಂಘಟನೆಗಳ ಒಕ್ಕೂಟ ಬೆಂಬಲ!

ಇದರಿಂದ ಅಭಿಮಾನಿಗಳಿಗೆ ಇದೀಗ ಶಾಕ್​ ಆಗಿದೆ. ಕಿರುಕುಳ ನೀಡಿದ ಆ ಹೀರೋ ಯಾರೆಂಬ ಚಿಂತೆಯಲ್ಲಿದ್ದಾರೆ ಎಂದು ಬಜ್​ ಬಾಸ್ಕೆಟ್​ ಎಂಬ ಎಕ್ಸ್​ ಖಾತೆಯಲ್ಲಿ ನಿತ್ಯಾ ಮೆನನ್​ ಫೋಟೋದೊಂದಿಗೆ ಪೋಸ್ಟ್​ ಮಾಡಲಾಗಿದೆ I ಈ ಸುದ್ದಿಯ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.

ನಾವು ಈ ಭೂಮಿಯ ಮೇಲೆ ಅಲ್ಪಾವಧಿಗೆ ಮಾತ್ರ ಇರುತ್ತೇವೆ. ನಾವು ಒಬ್ಬರಿಗೊಬ್ಬರು ಎಷ್ಟು ತಪ್ಪು ಮಾಡುತ್ತೇವೆ ಎಂದು ನನಗೆ ಯಾವಾಗಲೂ ಆಶ್ಚರ್ಯವಾಗುತ್ತದೆ. ನಾನಿಂದು ಇದರ ಬಗ್ಗೆ ಹೇಳಲೇಬೇಕಿದೆ. ಏಕೆಂದರೆ, ಹೊಣೆಗಾರಿಕೆ ಮಾತ್ರ ಕೆಟ್ಟ ನಡವಳಿಕೆಯನ್ನು ನಿಲ್ಲಿಸುತ್ತದೆ. ಮೊದಲು ಒಳ್ಳೆಯ ಮನುಷ್ಯರಾಗಿ ಎನ್ನುವ ಮೂಲಕ ಸುಳ್ಳು ಸುದ್ದಿ ಹರಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Exit mobile version