Site icon PowerTV

ಕರ್ನಾಟಕ ಬಂದ್​ಗೆ ಬೆಂಬಲ ನೀಡಿದ ಚಿತ್ರರಂಗ!

ಬೆಂಗಳೂರು :  ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕರ್ನಾಟಕ ಬಂದ್​ಗೆ ವಾಟಾಳ್ ನಾಗರಾಜ್ ಅವರು ಕರೆ ನೀಡಿದ್ದಾರೆ. ಇದಕ್ಕೆ ಚಿತ್ರರಂಗದವರು ಕೂಡ ಬೆಂಬಲ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​.ಎಂ.ಸುರೇಶ್ ಮಾತನಾಡಿದ್ದಾರೆ.
ನೆಲ, ಜಲ, ಭಾಷೆ ವಿಚಾರವಾಗಿ ಚಿತ್ರರಂಗದವರಿಂದ ಯಾವಾಗಲೂ ಬೆಂಬಲ ಇದ್ದೆ ಇರುತ್ತದೆ. ಶುಕ್ರವಾರದ ಬಂದ್​ಗೆ ನಮ್ಮ ಬೆಂಬಲ ಇದೆ.

ಇದನ್ನೂ ಓದಿ: ಬಿಜೆಪಿ ಜತೆ ಮೈತ್ರಿಗೆ ನಾನೇ ಅನುಮತಿ ಕೊಟ್ಟಿದ್ದು; ಹೆಚ್.ಡಿ.ದೇವೇಗೌಡ

ಆದರೆ ನಮ್ಮ ಹೋರಾಟ ಹೇಗೆ ಎಂಬುದರ ಬಗ್ಗೆ ಇವತ್ತು ಸಭೆ ಮಾಡುತ್ತೇವೆ. ಪ್ರತ್ಯೇಕವಾಗಿ ಭಾಗಿಯಾಗಬೇಕಾ ಅಥವಾ ಕನ್ನಡ ಸಂಘಟನೆಗಳ ಜೊತೆಯೇ ಪ್ರತಿಭಟನೆ ಮಾಡಬೇಕಾ ಅನ್ನೋದನ್ನು ಚರ್ಚೆ ಮಾಡುತ್ತೇವೆ. ಕಲಾವಿದರ ಭಾಗಿ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಿ ತಿಳಿಸುತ್ತೇವೆ ಎಂದರು.

Exit mobile version