Site icon PowerTV

ಕನ್ನಡಿಗರು ಸಂಪೂರ್ಣ ಬೆಂಬಲ ಕೊಡಬೇಕು: ಸಾ ರಾ ಗೋವಿಂದ್

ಬೆಂಗಳೂರು : ಸೆಪ್ಟೆಂಬರ್​ 29 ರಂದು ನಡೆಯಲಿರುವ ಕರ್ನಾಟಕ ಬಂದ್​ ಗೆ ನಾವು ​​ಗೆ ಕರೆ ಕೊಟ್ಟಿದ್ದೇವೆ. ಕನ್ನಡಿಗರು ಸಂಪೂರ್ಣ ಬೆಂಬಲ ಕೊಡಬೇಕು ಅಂತಾ ಸಾ.ರಾ ಗೊವಿಂದ್ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮನ್ನ ಕರೆದುಕೊಂಡು ಯಾಕೆ ಇವರು ಮೇಕೆದಾಟು ಹೋರಾಟ ಮಾಡಿದರು. ಸರ್ಕಾರ ನಾಳೆಯೇ ತಮಿಳುನಾಡಿಗೆ ನೀರು ಬಿಡೋದನ್ನ ನಿಲ್ಲಿಸಿದರೆ ಬಂದ್ ವಾಪಾಸ್ ತೆಗದುಕೊಳ್ತೇವೆ. ಸೆ.29ರ ಬಂದ್ ಗೆ ಎಲ್ಲರೂ ಬೆಂಬಲ ನೀಡಬೇಕು.

ಇದನ್ನೂ ಓದಿ : ರಜನಿಕಾಂತ್ ಚಿತ್ರಕ್ಕೆ ಕರ್ನಾಟಕದಲ್ಲಿ ಬಹಿಷ್ಕಾರ ಹಾಕಿ: ವಾಟಾಳ್ ನಾಗರಾಜ್​!

ಸಿಎಂ ಹೇಳ್ತಿದ್ದಾರೆ ಬಂದ್ ಮಾಡೋದ್ರಿಂದ ಏನ್ ಪ್ರಯೋಜನ ಅಂತಾ.! ಮೇಕೆದಾಟು ವಿಚಾರದಲ್ಲಿ ನಾವು ಎಷ್ಟು ಹೋರಾಟ ಮಾಡಿದ್ವಿ ಅಂತಾ ಎಲ್ಲರಿಗೂ ಗೊತ್ತಿದೆ. ನೀವು ಮೊದಲು ನೀರು ಬಿಡೋದು ನಿಲ್ಸಿ ಎಂದು ಮುಖ್ಯಮಂತ್ರಿಗಳಿಗೆ ಪ್ರಶ್ನಿಸಿದರು. ಇನ್ನು, ನೀರು ಬಿಡುವ ವಿಚಾರದಲ್ಲಿ ಪ್ರಧಾನಿ ಕೂಡ ಆಟ ಆಡ್ತಿದ್ದಾರೆ. ಕೂಡಲೆ ಪ್ರಧಾನಿಯವರು ಮಧ್ಯಪ್ರವೇಶಿಸ ಬೇಕು ಎಂದು ಮನವಿ ಮಾಡಿಕೊಂಡರು.

Exit mobile version