Site icon PowerTV

ಬೆಂಗಳೂರು ಬಂದ್​ ಬೆಂಬಲಿಸಿ ಕನ್ನಡಿಗರ ಬಣದ ಕರವೇ ವತಿಯಿಂದ ಪ್ರತಿಭಟನೆ!

ಬೆಂಗಳೂರು ಗ್ರಾಮಾಂತರ : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಇಂದು ನೀಡಲಾಗಿದ್ದ ಬೆಂಗಳೂರು ಬಂದ್​ ಗೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಟೋಲ್​ ಬಳಿ ಪ್ರತಿಭಟನೆ ನಡೆಸಲಾಯಿತು.

ಬೆಂಗಳೂರು ಬಂದ್ ಕರೆ ಬೆಂಬಲಿಸಿ ಮಾರಸಂದ್ರ ಬಳಿ ಇರುವ ಟೋಲ್ ನಲ್ಲಿ ರಸ್ತೆ ತಡೆಮಾಡಿ ಕಾವೇರಿ ಹೋರಾಟಕ್ಕೆ ಬೆಂಬಲವನ್ನು ಸೂಚಿಸಲಾಯಿತು. ಈ ವೇಳೆ ತಮಿಳುನಾಡು ಮತ್ತು ಸುಪ್ರೀಂ ಕೋರ್ಟ್​ ತೀರ್ಪಿನ ವಿರುದ್ದ ಘೋಷಣೆ ಕೂಗಲಾಯಿತು. ಈ ನಡುವೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಇದನ್ನೂ ಓದಿ : ನಮ್ಮ ನಾಡಿನ ರೈತರ ಹಿತ ಕಾಪಾಡಲು ಯಾವತ್ತೂ ಹಿಂದೆ ಬೀಳುವುದಿಲ್ಲ: ಸಿಎಂ ಸಿದ್ದರಾಮಯ್ಯ

ಈ ಪ್ರತಿಭಟನೆಯಲ್ಲಿ ಕರವೇ ಅಧ್ಯಕ್ಷ ಬಿ.ಎಸ್ ಚಂದ್ರಶೇಖರ್. ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ರ.ರಮೇಶ್. ಉಪಾಧ್ಯಕ್ಷ ಆರಾಧ್ಯ. ಖಜಾಂಚಿ ಚೇತನ್. ರಾಜ್ಯ ಮುಖಂಡರಾದ ನಾಗೇಶ್. ದೊಡ್ಡೇಗೌಡ. ಕೊನಘಟ್ಟ ಚಂದ್ರು. ಪುನೀತ್. ಭುವನ್. ನರೇಂದ್ರ. ತಾಲೂಕು ಯುವ ಘಟಕದ ಅಧ್ಯಕ್ಷರಾದ ರಂಜಿತ್ ಕುಮಾರ್. ಬಸವರಾಜ್. ತಾಲೂಕು ಘಟಕದ ಅಪ್ಪಣ್ಣ. ಲಕ್ಷ್ಮಿಕಾಂತ್. ಅಂಬರೀಶ್. ಚಂದ್ರಶೇಖರ್. ತನ್ವೀರ್. ಸಯದ್ ಇರ್ಫಾನ್. ಚಾಂದ್ ಪಾಷ. ವೀರಭದ್ರ. ಶರೀಫ್. ಶಬೀರ್. ನಯಾಜ್. ಮೌಲ. ಮಹಿಳಾ ಘಟಕದ ಅಧ್ಯಕ್ಷರಾದ ರಾಧಮ್ಮ. ಕಮಲಮ್ಮ ಹಾಗೂ ಎಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.

Exit mobile version