Site icon PowerTV

‘ಒಬ್ಬ ದರೋಡೆಕೋರ, ಮತ್ತೊಬ್ಬ ಕಳ್ಳ’ : ಉದಯನಿಧಿ ಸ್ಟಾಲಿನ್​!

ತಮಿಳುನಾಡು : ಬಿಜೆಪಿ ನೇತೃತ್ವದ NDA ಒಕ್ಕೂಟದೊಂದಿಗಿನ 4 ವರ್ಷಗಳ ಮೈತ್ರಿಯಿಂದ ಹೊರಬಂದಿರುವುದಾಗಿ AIADMK ಹೇಳಿಕೆ ನೀಡಿದ ಬೆನ್ನಲ್ಲೇ ತಮಿಳುನಾಡು ಸಚಿವ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ.

ಒಬ್ಬ ದರೋಡೆಕೋರ, ಮತ್ತೊಬ್ಬ ಕಳ್ಳ ಎಂಬಂತೆ ಎರಡೂ ಪಕ್ಷಗಳು ಒಟ್ಟಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸಬಹುದು. AIADMK ಬಿಜೆಪಿಯೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡರೂ, 2024ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ವಿಜಯಶಾಲಿಯಾಗಲಿದೆ ಎಂದು ಅವರು ಭವಿಷ್ಯ ನುಡಿದರು.

ಇದನ್ನೂ ಓದಿ : 5 ಕೋಟಿ ಜನರನ್ನು ಕೊಲ್ಲಲಿದೆ ‘’‍X’’!

ಹೀಗೆ ಆಗುತ್ತಿರುವುದು ಇದು ಮೊದಲೇನಲ್ಲ. AIADMK ಮತ್ತು ಬಿಜೆಪಿ ಜಗಳವಾಡಬಹುದು. ಆದರೆ ಚುನಾವಣೆಯ ಸಮಯದಲ್ಲಿ ಅವರು ಮತ್ತೆ ಒಂದಾಗುತ್ತಾರೆ. ಏಕೆಂದರೆ ಒಬ್ಬರು ದರೋಡೆಕೋರರು ಮತ್ತು ಇನ್ನೊಬ್ಬರು ಕಳ್ಳರು ಎಂದು ಸ್ಟಾಲಿನ್ ಹೇಳಿದರು.

Exit mobile version