Site icon PowerTV

ಬೊಮ್ಮಾಯಿ ರಾತ್ರಿ ನೀರು ಬಿಟ್ಟಿದ್ದು ಮರೆತಿದ್ದಾರೆ : ಲಕ್ಷ್ಮಣ ಸವದಿ

ಬೆಳಗಾವಿ : ಕಾವೇರಿ ನೀರು ಹರಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ವೈಫಲ್ಯ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿಯವರು ರಾತ್ರಿ ನೀರು ಬಿಟ್ಟಿದ್ದು ಮರೆತಿದ್ದಾರೆ ಎಂದು ಕುಟುಕಿದ್ದಾರೆ.

ಬೊಮ್ಮಾಯಿಯವರು ವಿರೋಧ ಪಕ್ಷದಲ್ಲಿ ಇದ್ದುಕೊಂಡು ಹೇಳುವ ಮಾತು ಹೇಳುತ್ತಿದ್ದಾರೆ. ಕಾವೇರಿ ನೀರಿನ‌ ವಿಚಾರ ಅನೇಕ ವರ್ಷಗಳಿಂದ ವ್ಯಾಜ್ಯವಾಗಿದೆ. ಸುಪ್ರಿಂ ಕೋರ್ಟ್ ನಿರ್ದೇಶನ ಮೇರೆಗೆ ಪ್ರತಿದಿನ 5,000 ಕ್ಯೂಸೆಕ್ಸ್ ನೀರು ಹರಿಸಬೇಕಿದ್ದು ಧರ್ಮ ಸಂಕಟ. ಒಂದು ಕಡೆ ಜನರ ರಕ್ಷಣೆ, ಇನ್ನೊಂದು ಕಡೆ ಕಾನೂನು ರಕ್ಷಣೆ ಪಾಲಿಸಬೇಕು. ಸಿಎಂ ಕಾನೂನು ಚೌಕಟ್ಟಿನಲ್ಲಿ ಮಾಡಬೇಕಾದ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕುಮಾರಣ್ಣ ಬಿಸಿಲು ಬಂದಾಗ ಛತ್ರಿ ಹಿಡಿಯುತ್ತಾರೆ

I.N.D.I.A ಒಕ್ಕೂಟದ ಓಲೈಕೆಗೆ ಸರ್ಕಾರ ನೀರು ಹರಸುತ್ತಿದೆ ಎಂಬ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಣ್ಣ ಬಿಸಿಲು ಬಂದಾಗ ಛತ್ರಿ ಹಿಡಿಯುತ್ತಾರೆ. ಹೆಂಗೆಂಗ್ ಬಿಸಿಲು ಬರ್ತದೆ ಹಂಗಂಗ್ ಕೊಡೆ ಹಿಡಿತ್ತಾರೆ. ರಾಜಕಾರಣದ ಜಾಣತನ ಅವರಲ್ಲಿದೆ. ಅವರು ಯಾರ್ಯಾರನ್ನು ಯಾವ ರೀತಿ ಟೀಕೆ ಮಾಡಿದ್ರು? ಇಂದು ಅವರನ್ನೇ ಅಪ್ಪಿಕೊಳ್ಳುತ್ತಿದ್ದಾರೆ ಎಂದು ಕುಟುಕಿದ್ದಾರೆ.

Exit mobile version