Site icon PowerTV

ದಿನಾ ಬೆಳಗ್ಗೆ-ಸಂಜೆ ನೀರಿನ ಮಟ್ಟ ಚೆಕ್ ಮಾಡ್ತಿದ್ದೇನೆ : ಡಿ.ಕೆ. ಶಿವಕುಮಾರ್

ಬೆಂಗಳೂರು : ದಿನಾ ಬೆಳಗ್ಗೆ ಮತ್ತು ಸಂಜೆ ಕೆಆರ್​ಎಸ್​ ಜಲಾಶಯದ ನೀರಿನ ಮಟ್ಟ ಚೆಕ್ ಮಾಡ್ತಿದ್ದೇನೆ. ನಮ್ಮ ಅಧಿಕಾರಿಗಳು ಏನು ಮಾಡ್ತಾರೆ ನೋಡೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕಾವೇರಿ ವಿಚಾರವಾಗಿ ಬೆಂಗಳೂರು ಬಂದ್ ವಿಚಾರ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ನಾಗರಿಕರು, ಸಂಘಟನೆಗಳಿಗೆ ಅಭಿನಂದಿಸುವೆ. ಪ್ರತಿಭಟನೆ ಮಾಡುವವರನ್ನು ಹತ್ತಿಕ್ಕಲ್ಲ, ಅಭಿನಂದಿಸುವೆ. ಶಾಂತಿಯುತವಾಗಿ ಪ್ರತಿಭಟನೆ ಮಾಡ್ತಿದ್ದಾರೆ ಎಂದರು.

8 ರಿಂದ 10 ಸಾವಿರ ಕ್ಯೂಸೆಕ್ಸ್​ ಒಳ ಹರಿವಿದೆ. ಅಥಾರಿಟಿಯವರಿಗೆ ನೀರಿನ ಮಟ್ಟದ ಲೆಕ್ಕ ಇದೆ, ಯಾರೂ ಸುಳ್ಳು ಹೇಳಲು ಆಗಲ್ಲ. 5 ಸಾವಿರ ಕೂಸೆಕ್ಸ್ ನೀರು ಬಿಡಲು ಆಗಲ್ಲ. ಇನ್ನೂ 12,500 ಸಾವಿರ ಕೂಸೆಕ್ಸ್ ನೀರು ಬಿಡಲು ಆಗುತ್ತಾ? ಅವರು ಎಷ್ಟೇ ಬೇಡಿಕೆ ಇಟ್ರೂ ನೀರು ಬಿಡಲು ಸಾಧ್ಯವಿಲ್ಲ ಎಂದು ತಮಿಳುನಾಡಿನ ಬೇಡಿಕೆಯನ್ನು ಡಿಕೆಶಿ ಸಾರಾಸಗಟಾಗಿ ತಳ್ಳಿ ಹಾಕಿದರು.

ಇನ್ನೂ ಮಾಜಿಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊದಲು ರಾಜಕಾರಣ ಬಿಟ್ಟು, ರಾಜ್ಯದ ಹಿತ ಕಾಪಾಡಲಿ ಎಂದು ತಿರುಗೇಟು ನೀಡಿದರು.

Exit mobile version