Site icon PowerTV

ಯಾವುದೇ ಕಾರಣಕ್ಕೂ ನಾನು ಕರ್ನಾಟಕದ ವಿರೋಧಿಯಾಗಲಾರೆ : ಎಂ.ಎಸ್ ಧೋನಿ

ಬೆಂಗಳೂರು : ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ಜಲ ವಿವಾದ ಹಿಂದಿನಿಂದಲೂ ನಡೆಯುತ್ತಿದೆ. ಈ ವಿಚಾರದಲ್ಲಿ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರ ನಡೆ ಪ್ರಸಂಶನೀಯ.

ಹೌದು, 2018ರಲ್ಲಿ ತಮಿಳುನಾಡು ಪರ ಕಾವೇರಿ ಹೋರಾಟ ಬೆಂಬಲಿಸಿ ಕಪ್ಪು ಪಟ್ಟಿ ಧರಿಸಿ ಆಡುವಂತೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್ ಧೋನಿ ಅವರನ್ನು ಒತ್ತಾಯಿಸಲಾಯಿತು. ಇದಕ್ಕೆ ಧೋನಿ ಅವರು ನೀಡಿದ್ದ ಪ್ರತಿಕ್ರಿಯೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

‘ನಾನಿಲ್ಲಿ ಆಟವಾಡುವುದಕ್ಕೆ ಬಂದವನು. ಯಾವುದೇ ಕಾರಣಕ್ಕೂ ಕರ್ನಾಟಕದ ವಿರೋಧಿಯಾಗಲಾರೆ. ನಾನು ಇಡೀ ದೇಶದ ಸ್ವತ್ತು’ ಎಂದು ಎಂ.ಎಸ್. ಧೋನಿ ಪ್ರಬುದ್ಧತೆ ಮೆರೆದಿದ್ದರು. ಧೋನಿ ಅವರ ಅಂದಿನ ನಡೆ ಇಂದು ವೈರಲ್ ಆಗುತ್ತಿದೆ.

ಇನ್ನೂ, ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಿರುವ ರೈತರಿಗೆ ಇಡೀ ಕರುನಾಡಿನ ಜನತೆ, ಕನ್ನಡಪರ ಸಂಘಟನೆ, ಸ್ಯಾಂಡಲ್​ವುಡ್​ ನಟರು ಈಗಾಗಲೇ ಧ್ವನಿ ಎತ್ತಿದ್ದಾರೆ. ಇಂದು ಕರೆ ಕೊಟ್ಟಿರುವ ಬೆಂಗಳೂರು ಬಂದ್​ಗೆ ಭಾರತ ತಂಡದ ಆಟಗಾರ ಕನ್ನಡಿಗೆ ಕೆ.ಎಲ್ ರಾಹುಲ್​ ಅವರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.

Exit mobile version