Site icon PowerTV

ನಮ್ಮ ನೋವು ಅರ್ಥ ಮಾಡಿಸಲು ಬೆಂಗಳೂರು ಬಂದ್: ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು : ತಮಿಳುನಾಡು‌ ರೈತರು ನಮ್ಮ ನೋವನ್ನು ಸ್ವಲ್ಪವಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ಬೆಂಗಳೂರು ಬಂದ್ ನಡೆಸುತ್ತಿರುವುದು ನಮಗೆ ಸಮಸ್ಯೆಯಾಗಿದೆ. ಇದು ತಮಿಳುನಾಡಿನ ಜನಕ್ಕೆ ಅರ್ಥ ಆಗಲಿ ಎಂದು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಾವೇರಿ ಸಮಸ್ಯೆ ಪರಿಹಾರಕ್ಕೆ ತಮಿಳುನಾಡು ಸರ್ಕಾರದ ಮನವೊಲಿಸಲಿ: ಬಸವರಾಜ ಬೊಮ್ಮಾಯಿ

ಪ್ರತಿಭಟನೆ ಮಾಡುವುದು ನಮ್ಮ ನೋವು ನಮ್ಮ ಪಕ್ಕದ ರಾಜ್ಯದ ಅಣ್ಣ ತಮ್ಮಂದಿರಿಗೆ ಅರ್ಥ ಆಗಬೇಕು. ನಮಗೆ ಯಾವುದೇ ಆಕ್ರೋಶ ಇಲ್ಲ. ನಮ್ಮ ಪಕ್ಕದ ರಾಜ್ಯದ ನಮ್ಮ ರಾಜಕೀಯ ಮುಖಂಡರು ಇದ್ದಾರೆ. ಅವರು ಏನು ನಿಲುವು ತೆಗೆದುಕೊಂಡಿದ್ದಾರೆ. ಅದಕ್ಕೆ ನಮ್ಮ ನೋವು ಅರ್ಥ ಮಾಡಿಕೊಂಡು ಸ್ವಲ್ಪನಾದ್ರು ಬದಲಾವಣೆ ಮಾಡಿಕೊಳ್ಳಲಿ ಎಂಬ ಸಂದೇಶ ಕೊಡಲಿಕ್ಕೆ ಬಂದ್ ಮಾಡುತ್ತಿದ್ದಾರೆ ಎಂದರು.

Exit mobile version