Site icon PowerTV

ಬೆಂಗಳೂರಿನಲ್ಲಿ ದೋಸೆ ಸವಿದ ವೆಂಕಯ್ಯ ನಾಯ್ಡು

ಬೆಂಗಳೂರು : ಮಾಜಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಇಂದು ಬೆಂಗಳೂರಿನಲ್ಲಿ ದೋಸೆ ಸವಿದಿದ್ದಾರೆ.

ಈ ಕುರಿತು xನಲ್ಲಿ ಪೋಸ್ಟ್​ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಂಜಾನೆಯ ವಾಕಿಂಗ್ ಬಳಿಕ ಸಂಸದ ಪಿ.ಸಿ. ಮೋಹನ್ ಅವರೊಂದಿಗೆ ಹೋಟೆಲ್ ಜನಾರ್ದನ್‌ನಲ್ಲಿ ನೆಚ್ಚಿನ ದೋಸೆಯನ್ನು ಸವಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಶಿವಾನಂದ ಸರ್ಕಲ್‌ನಲ್ಲಿರುವ ಜನಾರ್ದನ ಹೋಟೆಲ್‌ನಲ್ಲಿ ವೆಂಕಯ್ಯ ನಾಯ್ಡು ಮಸಾಲೆ ದೋಸೆ ಸವಿದಿದ್ದಾರೆ. ಇದು ಅವರ ಇಷ್ಟದ ಉಪಹಾರವೂ ಹೌದು. ಬೆಂಗಳೂರಿಗೆ ಭೇಟಿ ನೀಡದ ವೇಳೆ ಜನಾರ್ದನ ಹೋಟೆಲ್‌ನಲ್ಲಿ ದೋಸೆ ಸವಿಯುತ್ತಾರೆ. ಅದರಂತೆ ಇಂದೂ ಅವರು ಮಸಾಲೆ ದೋಸೆ ಸವಿದು ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಜನಾರ್ದನ ಹೋಟೆಲ್‌ ಬಹಳ ಹಳೆಯ ಹೋಟೆಲ್. ಈ ಹೋಟೆಲ್ ರಾಜಕಾರಣಿಗಳಿಗೆ ಅಚ್ಚುಮೆಚ್ಚು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಅನೇಕರು ಈ ಹೋಟೆಲ್​ಗೆ ಆಗಮಿಸಿ ದೋಸೆ ಸವಿಯುತ್ತಾರೆ.

Exit mobile version