Site icon PowerTV

ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದರ್ಶನ ಪಡೆದ ತೆಲುಗು ನಟ ಶ್ರೀಕಾಂತ್

ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ತೆಲುಗು ಚಿತ್ರನಟ ಶ್ರೀಕಾಂತ್ ಭಾನುವಾರ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.

ನೆಚ್ಚಿನ ನಟ ಶ್ರೀಕಾಂತ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ, ಪ್ರಧಾನ ಅರ್ಚಕ ನಾಗೇಂದ್ರ ಶರ್ಮಾ ಸೇರಿ ಹಲವರು ಶ್ರೀಕಾಂತ್ ಅವರನ್ನು ಬರಮಾಡಿಕೊಂಡು ಸತ್ಕರಿಸಿದರು.

ಇದನ್ನೂ ಓದಿ: ಕಾವೇರಿ ವಿಚಾರ: ನಾವು ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ: ಡಿಬಾಸ್​ ದರ್ಶನ್​

ತೆಲುಗು ಚಿತ್ರನಟ‌ ಶ್ರೀಕಾಂತ್ ಕನ್ನಡ ಚಿತ್ರರಂಗದಲ್ಲೂ ಛಾಪು‌ಮೂಡಿಸಿದ್ದು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ದಿ.ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಸಿನಿಮಾದಲ್ಲೂ ಪೋಷಕ‌ ನಟರಾಗಿ ಶ್ರೀಕಾಂತ್ ನಟಿಸಿದ್ದಾರೆ.

Exit mobile version