Site icon PowerTV

ನಾಳೆ ಇಡೀ ಬೆಂಗಳೂರು ಬಂದ್ ಆಗಬೇಕು : ಯಡಿಯೂರಪ್ಪ

ಬೆಂಗಳೂರು : ಕಾವೇರಿ ನದಿ ನೀರು ವಿಚಾರವಾಗಿ ನಾಳೆ ನಡೆಯಲಿರುವ ಬೆಂಗಳೂರು ಬಂದ್​​ ಯಶಸ್ವಿಯಾಗಬೇಕು. ಇಡೀ ಬೆಂಗಳೂರು ಸಂಪೂರ್ಣ ಬಂದ್ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹೋಟೆಲ್ ಮತ್ತಿತರ ವ್ಯಾಪಾರಸ್ಥರು ಅಂಗಡಿಗಳನ್ನ ಮುಚ್ಚಿ ಬೆಂಗಳೂರಿನ ಜ್ವಲಂತ ಸಮಸ್ಯೆಗಳಿಗೆ ಬೆಂಬಲ ನೀಡಬೇಕು. ಯಾರಾದರೂ ಹೋಟೆಲ್ ತೆರೆದು ವ್ಯಾಪಾರ ಮಾಡಲು ಮುಂದಾದರೆ ಮುಂದೆ ಆಗುವ ತೊಂದರೆಗಳಿಗೆ ನೀವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಒಂದೇ ಒಂದು ಹನಿ ಸರ್ಕಾರ ನೀರು ಬಿಟ್ರೆ ಹೋರಾಟ ತೀವ್ರ ಆಗಲಿದೆ. ಇನ್ಮುಂದೆ ನೀರು ಬಿಟ್ರೆ ಮುಂದಿನ ಆಗುಹೋಗುಗಳಿಗೆ ಸರ್ಕಾರವೇ ಕಾರಣ ಆಗಲಿದೆ. ಸಿಎಂ, ಡಿಸಿಎಂ ಬೇಜವಾಬ್ದಾರಿಯಿಂದ ನೀರು ಬಿಟ್ಟು ಗೊಂದಲಕ್ಕೆ ಸಿಕ್ಕಿಸಲಾಗಿದೆ. ತಮಿಳುನಾಡಿನ ಏಜೆಂಟರಂತೆ ಇವರು ವರ್ತಿಸುತ್ತಿದ್ದಾರೆ. ಸರ್ಕಾರ ತಪ್ಪು ಮುಂದುವರೆಸಿದೆ. ಈಗಲಾದರೂ ನೀರು ಬಂದ್ ಮಾಡಿ ಬೆಂಗಳೂರಿನ ಜನತೆಗೆ ಕುಡಿಯುವ ನೀರನ್ನು ಒದಗಿಸಲಿ ಎಂದು ಆಗ್ರಹಿಸಿದ್ದಾರೆ.

Exit mobile version