Site icon PowerTV

ಕಾವೇರಿ ವಿಚಾರ: ನಾವು ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ: ಡಿಬಾಸ್​ ದರ್ಶನ್​

ಮೈಸೂರು : ಕಾವೇರಿ ಹೋರಾಟಕ್ಕೆ ಕನ್ನಡ ನಟರು ಸಕ್ರಿಯರಾಗಿ ಬರುತ್ತಿಲ್ಲ ಎಂಬ ಕೂಗಿಗೆ ನಟ ದರ್ಶನ್ ಗರಂ ಆಗಿದ್ದಾರೆ.

ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ಈ ಬಗ್ಗೆ ಮಾತನಾಡಿರೋ ನಟ ದರ್ಶನ್, ಕಾವೇರಿ ಹೋರಾಟದ ಬಗ್ಗೆ ಮೌನ ಮುರಿದಿದ್ದು ನಟರು ಹೋರಾಟಕ್ಕೆ ಬರುತ್ತಿಲ್ಲ ಎಂಬ ಕೂಗಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದರ್ಶನ್, ಸುದೀಪ್, ಶಿವಣ್ಣ, ಯಶ್, ಅಭಿ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ ಎಂದು ಪ್ರಶ್ನಿಸಿದ್ದಾರೆ.

ಮೊನ್ನೆ ಬಂದ ತಮಿಳು ಚಿತ್ರದಲ್ಲಿ ಕರ್ನಾಟಕದಲ್ಲೇ ಕೋಟಿ ಕೋಟಿ ಮಾಡಿದವನು ನಿಮಗೆ ಕಾಣ್ತಿಲ್ವ? ಕರ್ನಾಟಕದಲ್ಲೇ ಒಬ್ಬ ವಿತರಕ ತಮಿಳು ಚಿತ್ರದಿಂದ ಕರ್ನಾಟಕದಲ್ಲೇ 36 ಕೋಟಿ ರೂ. ಮಾಡಿದ. 6 ಕೋಟಿ ಹಾಕಿ 36 ಕೋಟಿ ಮಾಡಿದ. ಅವನಿಗೆ ಯಾಕೆ ನೀವು ಕೇಳಲ್ಲ? ನಾವು ಮಾತ್ರ ನಿಮಗೆ ಕಾಣೋದಾ? ನಿಮಗೆ ಪ್ರಶ್ನೆ ಕೇಳ್ತಾ ಇದ್ದೀನಿ ಹೇಳಿ ಎಂದು ಜನರನ್ನು ದರ್ಶನ್ ಪ್ರಶ್ನಿಸಿದ್ದಾರೆ.

Exit mobile version