Site icon PowerTV

ಭಾರಿ ಮುಖಭಂಗ..! NDA ಒಕ್ಕೂಟದಿಂದ ಹೊರಬಂದ AIADMK

ಬೆಂಗಳೂರು : ಇಂದಿನಿಂದ ಬಿಜೆಪಿ, ಎನ್​ಡಿಎ ಜೊತೆಗಿನ ಮೈತ್ರಿ ಮುರಿದಿರುವುದಾಗಿ AIADMK ಪಕ್ಷ ಅಧಿಕೃತವಾಗಿ ಘೋಷಿಸಿದೆ.

ಹೌದು, ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ AIADMK ಬಿಜೆಪಿ  ಜೊತೆಗಿನ ಮೈತ್ರಿಯಿಂದ ಹೊರಬರುವ ನಿರ್ಧಾರ ಪ್ರಕಟಿಸಿದೆ. ದಕ್ಷಿಣ ರಾಜ್ಯಗಳಲ್ಲಿ ಬಲಿಷ್ಠವಾಗುವ ಬಿಜೆಪಿ ಕನಸಿಗೆ ಇದೀಗ ಭಾರಿ ಮುಖಭಂಗವಾಗಿದೆ.

ಪಳನಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪ್ರಧಾನ ಕಚೇರಿಯ ಪದಾಧಿಕಾರಿಗಳು ಮತ್ತು ಜಿಲ್ಲಾ ಕಾರ್ಯದರ್ಶಿಗಳು ಈ ಕುರಿತು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಮಾಜಿ ಸಚಿವರು ಮತ್ತು ಹಿರಿಯ ಮುಖಂಡರಾದ ಕೆ.ಪಿ ಮುನುಸಾಮಿ ಅವರು ಪಕ್ಷದ ಕೇಂದ್ರ ಕಚೇರಿಯಲ್ಲಿ ಹಲವಾರು ಮಾಜಿ ಸಚಿವರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಗುಂಪುಗಳ ನಡುವೆ ನಿರ್ಣಯವನ್ನು ಓದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಇಂದಿನಿಂದ ಮೈತ್ರಿ ಇಲ್ಲ

ರಾಜ್ಯ ಬಿಜೆಪಿ ನಾಯಕರು ನಮ್ಮ ನಾಯಕರು, ನಮ್ಮ ಪ್ರಧಾನ ಕಾರ್ಯದರ್ಶಿ, ಕಾರ್ಯಕರ್ತರ ಮೇಲೆ ನಿರಂತರವಾಗಿ ಅನಗತ್ಯವಾಗಿ ಟೀಕೆಗಳನ್ನು  ಮಾಡುತ್ತಿದ್ದಾರೆ. ಹೀಗಾಗಿ, ಇಂದಿನಿಂದ ಮೈತ್ರಿ ಇಲ್ಲ ಎಂದು AIADMK ಪಕ್ಷ ತಿಳಿಸಿದೆ. ಈ ಹಿನ್ನೆಲೆ ಚೆನ್ನೈನಲ್ಲಿ AIADMK ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

Exit mobile version