Site icon PowerTV

ಮಳೆಗಾಗಿ ಮೈಸೂರಿನಲ್ಲಿ 20 ಯತಿಗಳಿಂದ ವಿಶೇಷ ಪೂಜೆ

ಮೈಸೂರು : ರಾಜ್ಯದಲ್ಲಿ ಕಾವೇರಿ ಹೋರಾಟದ ಕಿಚ್ಚು ಮುಂದುವರಿದಿದ್ದು, ಮೈಸೂರಿನಲ್ಲಿ ಮಳೆಗಾಗಿ ಸಂಕಲ್ಪ ಪೂಜೆ ನೆರವೇರಿಸಲಾಯಿತು.

ಲಕ್ಷ್ಮೀಪುರಂನ ಮಾಧವಕೃಪದಲ್ಲಿ ವರುಣನಿಗಾಗಿ, ಸುಮಾರು 20 ಯತಿಗಳು ವಿಶೇಷ ಪೂಜೆ ನೆರವೇರಿಸಿದರು. 21 ಪುಣ್ಯಕ್ಷೇತ್ರ 7 ಸಪ್ತನದಿಗಳ ನದಿಯ ತಟದ ಮಟ್ಟಿನಿಂದ ತಯಾರಿಸಿರುವ ಗಣಪ ಹಾಗೂ ಚಂದ್ರಯಾನ-3ರ ಯಶೋಗಾಥೆ ಬಿಂಬಿಸುವ ಗಣಪನ ಪ್ರತಿಷ್ಠಾಪನೆ ಮಾಡಲಾಗಿತ್ತು.

ಇನ್ನು, ವಿಕ್ರಮ್ ಲ್ಯಾಂಡರ್, ಶಿವಶಕ್ತಿ ಪಾಯಿಂಟ್, ಪ್ರಜ್ಞ್ಯಾನ್ ರೋವರ್‌ನ ಕೂಡ ನಿರ್ಮಾಣ ಮಾಡಲಾಗಿದ್ದು, ಚಂದ್ರಗ್ರಹದ ಮೇಲೆ ವಿರಾಜಮಾನರಾಗಿರುವ ವಿಘ್ನನಿವಾರಕನ ವೇದ-ಮಂತ್ರ-ಪಾರಾಯಣದ ಮೂಲಕ ವರುಣನಿಗೆ ಯತಿಗಳು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಬಂದ್‌ಗೆ ಹಿತರಕ್ಷಣಾ ಸಮಿತಿ ಬೆಂಬಲ

ರೈತ ಹಿತರಕ್ಷಣಾ ಸಮಿತಿ ಸಭೆ ಮುಕ್ತಾಯವಾಗಿದ್ದು, ಸರ್ಕಾರದ ನಡೆ ನೋಡಿಕೊಂಡು ಪ್ರತಿಭಟನೆ ತೀವ್ರತೆ ಹೆಚ್ಚಿಸಲು ಚಿಂತನೆ ಮಾಡಲಾಗಿದೆ ಎಂದು ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಬೆಂಗಳೂರು ಬಂದ್ ಬೆಂಬಲಿಸಲು ಸಮಿತಿ ಸದಸ್ಯರು ನಿರ್ಧಾರ ಮಾಡಿದ್ದಾರೆ. ಸೆ. 26ರ ಬಂದ್‌ಗೆ ಮಂಡ್ಯದಿಂದ ಹಿತರಕ್ಷಣಾ ಸಮಿತಿ ನಿಯೋಗ ತೆರಳಿ ಬೆಂಬಲ ನೀಡಿವೆ. ಮಂಡ್ಯದಲ್ಲಿ ಎಂದಿನಂತೆ ಪ್ರತಿಭಟನೆ ಮುಂದುವರೆಸಲು ತೀರ್ಮಾನಿಸಲಾಗಿದ್ದು, KRS ಜಲಾಶಯದಲ್ಲಿ ಉಳಿದಿರುವ ಒಂದು ಹನಿ ನೀರನ್ನು ಬಿಡದಿರಲು ಆಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

Exit mobile version