Site icon PowerTV

ಕರ್ನಾಟಕ U19 ತಂಡಕ್ಕೆ ರಾಹುಲ್ ದ್ರಾವಿಡ್ ಪುತ್ರ ಆಯ್ಕೆ!

ಬೆಂಗಳೂರು :  ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ಮತ್ತು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಕರ್ನಾಟಕ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮುಂಬರುವ ವಿನೂ ಮಂಕಡ್ ಟ್ರೋಫಿಗಾಗಿ ಆಯ್ಕೆ ಮಾಡಲಾಗಿರುವ ಕರ್ನಾಟಕದ 15 ಸದಸ್ಯರ ತಂಡದಲ್ಲಿ 17 ವರ್ಷದ ಸಮಿತ್ ಸ್ಥಾನ ಪಡೆದಿದ್ದಾರೆ. ಇನ್ನು ಕರ್ನಾಟಕ ಅಂಡರ್ 19 ತಂಡವನ್ನು ಧೀರಜ್ ಗೌಡ ಮುನ್ನಡೆಸಲಿದ್ದು, ಧ್ರುವ್ ಪ್ರಭಾಕರ್ ಉಪನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ವಿಕೆಟ್ ಕೀಪರ್​ಗಳಾಗಿ ಹರ್ಷಿಲ್ ಧರ್ಮಾನಿ ಹಾಗೂ ಯುವರಾಜ್ ಅರೋರ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ‘ಚಿಕ್ಕ ಮಗುವನ್ನ ಬೇಟೆಯಾಡ್ತಿದ್ದಾರೆ’: ಉಯದನಿಧಿ ಸ್ಟಾಲಿನ್​ ಪರ ನಿಂತ ನಟ ಕಮಲ್​ ಹಾಸನ್​!

ರಾಹುಲ್ ದ್ರಾವಿಡ್ ಅವರ ಇಬ್ಬರು ಮಕ್ಕಳು ತಂದೆಯ ಹಾದಿಯಲ್ಲಿ ಸಾಗಿದ್ದಾರೆ. ಹಿರಿಯ ಮಗ ಸಮಿತ್ ಹಾಗೂ ಕಿರಿಯ ಮಗ ಅನ್ವಯ್ ಕ್ರಿಕೆಟನ್ನು ಆಯ್ಕೆ ಮಾಡಿಕೊಂಡಿದ್ದು, ಇದೀಗ ತಂದೆಯಂತೆ ಕ್ರೀಡಾ ಅಂಗಳದಲ್ಲಿ ಸಾಧನೆ ಮಾಡಲು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

Exit mobile version