Site icon PowerTV

ಸ್ವಂತ ತಂಗಿ ಗಂಡಗ ಭಾಯಿ ಜಾನ್ ಅನ್ನಲ್ಲ, ನಮ್ಗೆ ಹಮ್ ಭಾಯಿ ಭಾಯಿ ಅಂತಾರೆ : ಶಾಸಕ ಯತ್ನಾಳ್

ರಾಯಚೂರು : ಮುಸ್ಲಿಮರಿಗೆ ಭಾಯಿ ಭಾಯಿ ಅಂತಿರಾ. ಅವರು 50 ಪರ್ಸೆಂಟ್ ಆಗುವವರೆಗೆ ನಿಮ್ಮ ಜೊತೆ ಮಾತ್ರ ಭಾಯಿ ಭಾಯಿ. ಸ್ವಂತ ತಂಗಿ ಗಂಡಗ ಭಾಯಿ ಜಾನ್ ಅನ್ನಲ್ಲ. ನಮಗೆ ಹಮ್ ಭಾಯಿ ಭಾಯಿ ಅಂತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ರಾಯಚೂರಿನ ವೀರ ಸಾವರ್ಕರ್ ಯೂಥ್ ಅಸೋಸಿಯೇಷನ್​ನಿಂದ ಹಮ್ಮಿಕೊಂಡಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಹಮ್ಮದ್ ಅಲಿ ಜಿನ್ನಾನ ಮೊಮ್ಮಕ್ಕಳು‌ ಇಲ್ಲೆ ಇದ್ದಾರೆ. ಅವರು ಅಲ್ಲಿ ಹೋದರೆ ಹೊಡಿತಾರೆ. ಅವರು ಪಕ್ಕಾ ಮುಸಲ್ಮಾನರಲ್ವಂತೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಮಹಾನ್ ಪುರುಷರಿಗೆ ಅವಮಾನ ಮಾಡುವ ಕೆಲಸ ಆಗುತ್ತಿದೆ. ಸಾವರ್ಕರ್ ಚಪ್ಪಲಿ ಧೂಳಿಗು ಸಮನಾಗದೇ ಇರುವವರು ಅವರ ಬಗ್ಗೆ ಮಾತನಾಡುತ್ತಾರೆ. ಬರೀ ಒಂದು ವಾರ ಎತ್ತಿನ ಗಾಲಿಗೆ ಕಟ್ಟಿದಂತೆ ಕಟ್ಟಿದರೇ ಆ ಮಕ್ಕಳಿಗೆ ಅರ್ಥ ಆಗತ್ತದೆ ಎಂದು ಕಿಡಿಕಾರಿದರು.

ಅವರಿದ್ದರೆ ರಂಜಾನ್ ದಿನ ಉದ್ಘಾಟನೆ ಆಗುತ್ತಿತ್ತು

ಗಣೇಶ ಚತುರ್ಥಿಯಂದು ಹೊಸ ಪಾರ್ಲಿಮೆಂಟ್ ಉದ್ಘಾಟನೆ ಆಯ್ತು. ಬೇರೆ ಅವರಿದ್ದರೆ ರಂಜಾನ್ ದಿನ ಉದ್ಘಾಟನೆ ಆಗುತ್ತಿತ್ತು. ನಿತೀಶ್ ಕುಮಾರ್ ಬ್ರಿಡ್ಜ್ ಕಟ್ಟಿದ್ರು ಅದು ಒಂದೇ ದಿನಕ್ಕೆ ಬಿತ್ತು. ಹೊಸ ಪಾರ್ಲಿಮೆಂಟ್​ನಲ್ಲಿ ಅಖಂಡ ಭಾರತ ನಕಾಶೆ ಹಾಕಲಾಗಿದೆ. ಆದರೆ, ಓವೈಸಿ ಅಖಂಡ ಭಾರತ್ ಕ್ಯೂ ಲಗಾಯಾ ಅಂತಾನೆ. ಹೇ ತೇರಾ ಬಾಪ್ ಕಾ ಹೈ ಕ್ಯಾ ಎಂದು ಚಾಟಿ ಬೀಸಿದರು.

ಕೆಲವೇ ದಿನದಲ್ಲಿ ನಿಮ್ಮ ಪಾಕಿಸ್ತಾನ ವಿಭಜನೆ ಆಗತ್ತದೆ. ಕರಾಚಿಯಲ್ಲೂ ಗಣೇಶನನ್ನ ಕೂರಿಸುತ್ತೇನೆ. ಗಣೇಶನನ್ನ ಕೂರಿಸಲು ಪರ್ಮಿಷನ್ ಕೋಡುವ ಮಗ ಯಾರು? ಅವರಿನ್ನು ಹುಟ್ಟಿಲ್ಲ ಎಂದು ಗುಡುಗಿದರು.

Exit mobile version