Site icon PowerTV

ಗಣಪತಿ ವಿಸರ್ಜನೆ ವೇಳೆ ಮಸೀದಿ ಬಳಿ ಪಟಾಕಿ ಸಿಡಿಸಿದ ಹಿಂದೂ ಕಾರ್ಯಕರ್ತರು

ಶಿವಮೊಗ್ಗ : ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಪೊಲೀಸರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ನಡುಗೆ ವಾಗ್ವಾದ ಉಂಟಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಪುಣೆದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ದೇವಸ್ಥಾನ ಮಸೀದಿ ಎರಡು ಮುಖಾಮುಖಿ ಇದ್ದು, ಮಸೀದಿ ಇರುವ ಕಾರಣಕ್ಕೆ ಪಟಾಕಿಗೆ ಡಿವೈಎಸ್ ಪಿ ಶಿವಾನಂದ ಅನುಮತಿ ನಿರಾಕರಿಸಿದ್ದರು. ಈ ವೇಳೆ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ದೇವರಾಜ್ ಅರಳಿಹಳ್ಳಿ ನೇತೃತ್ವದಲ್ಲಿ ಗ್ರಾಮಸ್ಥರು ನಡು ರಾತ್ರಿಯಲ್ಲಿ ಪ್ರತಿಭಟನೆ ಕುಳಿತಿದ್ದರು.

ಪ್ರತಿಭಟನೆಯಲ್ಲಿ ಊರಿನ ಯುವಕರು, ಮಹಿಳೆಯರು ಭಾಗಿಯಾಗಿದ್ದರು. ಪಟಾಕಿ ಹೊಡೆಯಲು ಅನುಮತಿ ನೀಡುವ ವರೆಗೂ ಧರಣಿ ನಡೆಸುವುದಾಗಿ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಸ್ಥಗಿತಗೊಳಿಸಿ ಧರಣಿ ಕುಳಿತರು. ಈ ವೇಳೆ ಪೊಲೀಸರು ಯುವಕರ ನಡುವೆ ಕಾನೂನು ಅನುಮತಿ ಕುರಿತು ವಾಗ್ವಾದ ನಡೆಡಿದೆ.

ಸುಮಾರು ಒಂದು ಗಂಟೆ ಕಾಲ ನಡೆದ ಧರಣಿಗೆ ಪೊಲೀಸರು ಬಗ್ಗಿದ್ದು, ಪಟಾಕಿ ಸಿಡಿಸಲು ಅನುಮತಿ ಸಿಕ್ಕ ಹಿನ್ನೆಲೆ ಮೆರವಣಿಗೆ ಮುಂದುವರಿದಿದೆ.

Exit mobile version