Site icon PowerTV

‘ಚಿಕ್ಕ ಮಗುವನ್ನ ಬೇಟೆಯಾಡ್ತಿದ್ದಾರೆ’: ಉಯದನಿಧಿ ಸ್ಟಾಲಿನ್​ ಪರ ನಿಂತ ನಟ ಕಮಲ್​ ಹಾಸನ್​!

ಚನ್ನೈ : ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕಾಗಿ ಚಿಕ್ಕ ಮಗುವನ್ನು ಬೇಟೆಯಾಡುತ್ತಿದ್ದಾರೆ, ಬಿಜೆಪಿ ಮತ್ತು ಇನ್ನಿತರ ಸಂಘಟನೆಗಳು ಮಗುವನ್ನು ಟಾರ್ಗೆಟ್‌ ಮಾಡುತ್ತಿವೆ ಎಂದು ನಟ ಕಮಲ್‌ ಹಾಸನ್‌ ತಿಳಿಸಿದ್ದಾರೆ.

ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕಾಗಿ ಚಿಕ್ಕ ಮಗುವನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಹೆಸರು ಹೇಳದೆಯೇ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಅವರನ್ನ ಹೇಳಿಕೆಯನ್ನ ಬೆಂಬಲಿಸಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ!

ಸನಾತನ ಧರ್ಮದ ಬಗ್ಗೆ ಸಚಿವರು ನೀಡಿದ ಹೇಳಿಕೆಯಲ್ಲಿ ಹೊಸದೇನೂ ಇಲ್ಲ. ದ್ರಾವಿಡ ಚಳಚಳಿಯ ನಾಯಕರು, ಉದಯನಿಧಿ ಅವರ ತಾತ ಕರುಣಾನಿಧಿ ಅವರೂ ಈ ಬಗ್ಗೆ ಮಾತನಾಡಿದ್ದಾರೆ. ದಿವಂಗತ ಪೆರಿಯಾರ್ ವಿ ರಾಮಸಾಮಿ ಅವರೂ ಸಾಮಾಜಿಕ ಅನಿಷ್ಠಗಳನ್ನು ಎಷ್ಟು ಕಟುವಾಗಿ ವಿರೋಧಿಸಿದ್ದರು ಎಂಬುದನ್ನ ನಾವು ಅವರ ಜೀವನ ಸ್ವಭಾವದಿಂದಲೇ ಅರ್ಥಮಾಡಿಕೊಳ್ಳಬಹುದು. ನಮಗೆಲ್ಲಾ ಸನಾತನ ಎಂಬ ಪದದ ಅರ್ಥ ತಿಳಿದಿದ್ದೇ ಅವರಿಂದ ಎಂದು ಹೇಳಿದ್ದಾರೆ.

Exit mobile version