Site icon PowerTV

ಕಾರು ಚಾಲಕನ ಉಸಿರು ಕಸಿದ ಕಿಲ್ಲರ್ KSRTC

ರಾಯಚೂರು : KSRTC ಬಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಎಂದು ರಾಯಚೂರು ಜಿಲ್ಲೆಯ ಮಿಯಾಪುರ ಕ್ರಾಸ್ ಬಳಿ ನಡೆದಿದೆ.

ಇಂಡಿಯಿಂದ ಮಂತ್ರಾಲಯ ಕಡೆಗೆ ಹೊರಟಿದ್ದ KSRTC ಬಸ್, ದೇವದುರ್ಗ ಕಡೆಗೆ ಹೊರಟಿದ್ದ ಕಾರಿಗೆ ಡಿಕ್ಕಿಹೊಡೆದೆ. ಪರಿಣಾಮ ಕಾರು ಚಾಲಕ ಮಲ್ಲಪ್ಪ(55) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

KSRTC ಬಸ್ ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version