Site icon PowerTV

ರಾಜ್ಯದಲ್ಲಿ ಎರಡೆರಡು ಬಂದ್..! ಬಂದ್ ದಿನ ಏನೇನಿರುತ್ತೆ? ಏನೇನಿರಲ್ಲ?

ಬೆಂಗಳೂರು : ರಾಜ್ಯದಲ್ಲಿ ಎರಡೆರಡು ಬಂದ್​.. ಬಿ ಅಲರ್ಟ್​​​.. ಬೆಂಗಳೂರು ಜನರೇ ಡಬಲ್​​​ ಬಂದ್​​ಗೆ ರೆಡಿಯಾಗಿದೆ.

ದಿನೇ ದಿನೇ ಕರುನಾಡಿನಲ್ಲಿ ಭುಗಿಲೆದ್ದಿರುವ ಕಾವೇರಿ ಕಿಚ್ಚು ಮತ್ತಷ್ಟು ಕಾವೇರುತ್ತಾ ಹೋಗುತ್ತಿದೆ. ಮಂಡ್ಯ ಬಂದ್ ಬೆನ್ನಲ್ಲೇ ಇದೀಗ ರಾಜ್ಯದ ಜನರಿಗೆ ಡಬಲ್ ಬಂದ್ ಶಾಕ್ ಕಾಡುತ್ತಿದೆ. ಹಾಗಾದರೆ ಯಾವೆಲ್ಲಾ ದಿನ ಬಂದ್ ನಡೆಯುತ್ತೆ. ಬಂದ್‌ ದಿನ ಏನೇನಿರುತ್ತೆ? ಏನೇನಿರಲ್ಲ? ಎಂಬುದರ ಡಿಟೇಲ್ಸ್ ಇಲ್ಲಿದೆ.

ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ರಾಜ್ಯದಲ್ಲಿ ಭುಗಿಲೆದ್ದಿರುವ ಕಾವೇರಿ ಹೋರಾಟದ ಕಿಚ್ಚು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಮಂಡ್ಯ ಬಂದ್‌ ಮಾಡಿದ ಬೆನ್ನಲ್ಲೇ ಸೆಪ್ಟೆಂಬರ್​​ 26ರಂದು ಬೆಂಗಳೂರು ಬಂದ್​ಗೆ ಜಲ ಸಂರಕ್ಷಣಾ ಸಮಿತಿಯಿಂದ ಕರೆ ನೀಡಲಾಗಿದೆ. ಬಂದ್​​ಗೆ 150ಕ್ಕೂ ಹೆಚ್ಚು ಸಂಘಟನೆಗಳ ಸಾಥ್​​ ನೀಡಲಿವೆ.

ಅಲ್ಲದೆ, ಸೆಪ್ಟೆಂಬರ್​​ 29ರಂದು ಅಖಂಡ ಕರ್ನಾಟಕ ಬಂದ್​​ ಮಾಡಲು ಸಂಘಟನೆಗಳು ಚಿಂತನೆ ನಡೆಸಿವೆ. ಈ ಬಗ್ಗೆ ಸೋಮವಾರ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಮಹತ್ವದ ಸಭೆ ಹಮ್ಮಿಕೊಂಡಿವೆ. ಸಭೆ ಬಳಿಕ ಕರ್ನಾಟಕ ಬಂದ್ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಅಂತ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಇನ್ನು ಬಂದ್‌ಗೆ ಪ್ರಮುಖವಾಗಿ ಯಾವಯಾವ ಸಂಘಟನೆಗಳು ಬೆಂಬಲ ಘೋಷಿಸಿವೆ ಎಂಬುದನ್ನು ನೋಡುವುದಾದರೆ..

ಬಂದ್‌ಗೆ ಯಾರ ಬೆಂ‘ಬಲ’?

ರೈತ ಸಂಘಟನೆಗಳು

ಕನ್ನಡಪರ ಸಂಘಟನೆಗಳು

ಟ್ಯಾಕ್ಸಿ ಚಾಲಕರ ಒಕ್ಕೂಟ

ಓಲಾ-ಉಬರ್​​ ಚಾಲಕರ ಒಕ್ಕೂಟ

ಬಿಬಿಎಂಪಿ ನೌಕರರ ಸಂಘ

ಕನ್ನಡ ಚಿತ್ರೋದ್ಯಮ

ಇನ್ನು ಯಾವ ಸಂಸ್ಥೆಗಳು ನೈತಿಕ ಬೆಂಬಲ ಘೋಷಿಸಿವೆ ಎಂಬುದನ್ನು ನೋಡುವುದಾದರೆ..

ಯಾರ್ಯಾರು ನೈತಿಕ ಬೆಂ’ಬಲ’?

ಐಟಿಬಿಟಿ ಕಂಪನಿಗಳು

ಕೈಗಾರಿಕೆಗಳ ಸಂಘ

KSRTC ನೌಕರರ ಸಂಘ

ಸಿಟಿ ಕ್ಯಾಬ್​ ಚಾಲಕರ ಸಂಘ

ಏರ್​​ಪೋರ್ಟ್​ ಚಾಲಕರ ಸಂಘ

ಹೋಟೆಲ್​ ಮಾಲೀಕರ ಸಂಘ

ಬೀದಿಬದಿ ವ್ಯಾಪಾರಿಗಳ ಸಂಘ

ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ

ಇನ್ನು ಬೆಂಗಳೂರು ಬಂದ್‌ ವೇಳೆ ಏನೇನಿರುತ್ತದೆ? ಏನೇನೆಲ್ಲಾ ಇರಲ್ಲ ಎಂಬುದನ್ನು ನೋಡುವುದಾದರೆ..

ಬೆಂಗಳೂರು ಬಂದ್‌ ವೇಳೆ ಏನೇನಿರುತ್ತೆ?

ಅಗತ್ಯ ಸೇವೆಗಳಿಗಷ್ಟೇ ಅವಕಾಶ

ಹಾಲು, ಪೇಪರ್, ಮೆಡಿಕಲ್ ಶಾಪ್

ತರಕಾರಿ, ಮಾರ್ಕೆಟ್, ಆಸ್ಪತ್ರೆ ಓಪನ್

ಆ್ಯಂಬುಲೆನ್ಸ್‌ ಸೇವೆ ಲಭ್ಯವಿರುತ್ತೆ

ಇನ್ನು ಬಂದ್ ವೇಳೆ ಏನೇನೆಲ್ಲಾ ಇರಲ್ಲ ಎಂಬುದನ್ನು ನೋಡುವುದಾದರೆ..

ಬೆಂಗಳೂರು ಬಂದ್ ವೇಳೆ ಏನೇನಿರಲ್ಲ?

ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್ ಬಂದ್?

ಆಟೋ, ಟ್ಯಾಕ್ಸಿ, ಓಲಾ, ಉಬರ್ ಸಿಗಲ್ಲ?

ಅಗತ್ಯ ಸೇವೆ ಬಿಟ್ಟು ಉಳಿದೆಲ್ಲಾ ಸೇವೆ ಬಂದ್

ಶಾಲಾ-ಕಾಲೇಜುಗಳು ಬಂದ್ ಸಾಧ್ಯತೆ

ಸಿನಿಮಾ ಥಿಯೇಟರ್, ಮಾಲ್‌ ಬಂದ್?

ಮಂಡ್ಯ, ಮದ್ದೂರು ಬೆನ್ನಲ್ಲೇ ಇದೇ 26ರಂದು ಕೆ.ಆರ್‌.ಪೇಟೆ ಬಂದ್‌ಗೂ ಸಂಘಟನೆಗಳು ಸಜ್ಜಾಗಿವೆ. ಬಂದ್​​ಗೆ ಜೆಡಿಎಸ್, ಬಿಜೆಪಿಯಿಂದಲೂ ಬೆಂಬಲ ಸಾಧ್ಯತೆ ಇದೆ. ಒಟ್ನಲ್ಲಿ ಕಳೆದ ಕೆಲ ವರ್ಷಗಳಿಂದ ತಣ್ಣಾಗಾಗಿದ್ದ ಕಾವೇರಿಯ ಕಾವು ಇದೀಗ ರಾಜ್ಯದಲ್ಲಿ ಮತ್ತೆ ವ್ಯಾಪಕವಾಗಿ ಹೊತ್ತಿಕೊಂಡಿದ್ದು, ಜನರಿಗೆ ಡಬಲ್ ಬಂದ್ ಶಾಕ್ ನೀಡಲು ಸಂಘಟನೆಗಳು ಸಜ್ಜಾಗಿವೆ.

Exit mobile version