Site icon PowerTV

ಏಷಿಯನ್ ಗೇಮ್ಸ್​ 2023: ಮೊದಲ ದಿನವೇ ಭಾರತದ ಪದಕ ಬೇಟೆ ಆರಂಭ!

ಚೀನಾ: 2023ರ ಏಷ್ಯನ್ ಗೇಮ್ಸ್‌ಗೆ ಶನಿವಾರ ಅಧಿಕೃತ ಚಾಲನೆ ದೊರೆತಿದ್ದು, ಮೊದಲ ದಿನವೇ ಭಾರತದ ಕ್ರೀಡಾಪಟುಗಳು 2 ಬೆಳ್ಳಿಯೊಂದಿಗೆ ಪದಕ ಬೇಟೆ ಆರಂಭಿಸಿದ್ದಾರೆ.

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷಿಯನ್​​ ಗೇಮ್ಸ್​ ನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಭಾರತ ಒಟ್ಟು 1886 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿತು. ಇದರೊಂದಿಗೆ ರಮಿತಾ, ಮೆಹುಲಿ ಘೋಷ್ ಮತ್ತು ಆಶಿ ಚೌಕ್ಸೆ ಅವರು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮೊದಲ ಪದಕವನ್ನು ಗೆದ್ದುಕೊಂಡಿದ್ದಾರೆ.

ಮತ್ತೊಂದೆಡೆ ಚೀನಾ 1896.6 ಅಂಕಗಳೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡರೆ, ಮಂಗೋಲಿಯಾ ಒಟ್ಟು 1880 ಅಂಕಗಳೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

ಹಾನ್ ಜಿಯಾಯು ಒಟ್ಟು 634.1 ರೊಂದಿಗೆ ಹೊಸ ಅರ್ಹತಾ ಏಷ್ಯನ್ ದಾಖಲೆಯನ್ನು ಸಹ ಸ್ಥಾಪಿಸಿದರು. ಭಾರತ ಪರ, ರಮಿತಾ ಮತ್ತು ಮೆಹುಲಿ ಘೋಷ್ ಕ್ರಮವಾಗಿ 631.9 ಮತ್ತು 630.8 ಮೊತ್ತದೊಂದಿಗೆ ವೈಯಕ್ತಿಕವಾಗಿ ಫೈನಲ್‌ಗೆ ಅರ್ಹತೆ ಪಡೆದರು.

Exit mobile version