Site icon PowerTV

ಕಿರುತರೆ ನಟಿಯ ಮೇಲೆ ಕಿರಿಕ್ ಆರೋಪ

ಬೆಂಗಳೂರು : ಕಿರುತರೆ ನಟಿ ಒಬ್ಬರು ಆಟೋ ಚಾರ್ಜ್​ ನೀಡದೆ ಅರ್ಧ ದಾರಿಯಲ್ಲಿ ಇಳಿದು ಚಾಲಕನ ಜೊತೆ ಕಿರಿಕ್ ಮಾಡಿಕೊಂಡಿರುವ ಘಟನೆ ಮಲ್ಲೇಶ್ವರಂ ಬನಶಂಕರಿ ಬಳಿ ನಡೆದಿದೆ.

ಪುನರ್ ವಿವಾಹ ಖ್ಯಾತಿಯ ಪದ್ಮಿನಿ ಅವರು ಆಟೋ ಚಾಲಕನ ಬಳಿ ಕಿರಿಕ್ ಮಾಡಿಕೊಂಡಿದ್ದಾರೆ. ಮಲ್ಲೇಶ್ವರಂನ ಮಾರ್ಗೇಸ ರಸ್ತೆಯಿಂದ ಬನಶಂಕರಿಗೆ ಪದ್ಮಿನಿ ಅವರು ಆಟೋ ಬುಕ್ ಮಾಡಿದ್ದಾರೆ. ಬಳಿಕ ಆಟೋದಲ್ಲಿ ಬನಶಂಕರಿ ಬಳಿ ತೆರಳಿದ ವೇಳೆ ಆಟೋ ಚಾಲಕ ಕುಲ್ದೀಪ್ ಎಂಬುವರಿಗೆ ಕ್ಷುಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು, 437 ರೂಪಾಯಿ ಅಟೊ ಚಾರ್ಜ್​ ಕೊಡದೇ ಅರ್ಧ ದಾರಿಯಲ್ಲಿ ಇಳಿದು ಕಿರಿಕ್ ಮಾಡಿದ್ದಾರೆ.

ಇದನ್ನು ಓದಿ : ಕರ್ನಾಟಕ U19 ತಂಡಕ್ಕೆ ರಾಹುಲ್ ದ್ರಾವಿಡ್ ಪುತ್ರ ಆಯ್ಕೆ!

ಈ ಹಿನ್ನೆಲೆ ಚಾಲಕ ಕುಲ್ದೀಪ್ 437 ರೂಪಾಯಿ ಲಾಸ್ ಮಾಡಿಕೊಂಡಿದ್ದು, ಕಿರುತರೆ ನಟಿ ಪದ್ಮಿನಿಯಿಂದ ಆದ ಅನ್ಯಾಯದ ವಿರುದ್ಧ ಚಾಲಕ ದೂರು ಕೊಡಲು ಮುಂದಾಗಿದ್ದಾರೆ.

ಅಷ್ಟೇ ಅಲ್ಲದೆ ದುರ್ನಡತೆ ಆರೋಪದ ಮೇಲೆ ಓಲಾದವರು ತಾತ್ಕಲಿಕವಾಗಿ ಅವರ ಕರ್ತವ್ಯಕ್ಕೆ ನಿರ್ಬಂಧ ಹಾಕಿದ್ದಾರೆ.

Exit mobile version