Site icon PowerTV

ಇವ್ಳು ‘ನಮ್ಮ ನಂದು..’ ನಾನು ನಂದಿನಿ ಹಾಡಿಗೆ ನಟಿ ರಮ್ಯಾ ರೀಲ್ಸ್!

ಬೆಂಗಳೂರು : ನಾನು ನಂದಿನಿ, ಬೆಂಗ್ಳೂರ್​ಗೆ ಬಂದೀನಿ ಹಾಡಿಗೆ ನಟಿ ರಮ್ಯಾ ಅಭಿಮಾನಿಗಳು ರಮ್ಯಾ ಅವರ ರೀಲ್ಸ್​ ಶೇರ್​ ಮಾಡಿಕೊಂಡಿದ್ದು, ಇದು ಸಕತ್​ ವೈರಲ್​ ಆಗುತ್ತಿದೆ.

ನಾನು ನಂದಿನಿ ಬೆಂಗಳೂರು ಬಂದಿನಿ, ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ​ ಸೃಷ್ಟಿಸಿದೆ. ಇದಕ್ಕೆ ರಮ್ಯಾ ಅಭಿಮಾನಿಗಳು ರೀಲ್ಸ್​ ಲಿಪ್ ಸಿಂಕ್ ಮಾಡಿದ್ದಾರೆ.

ಭವಿಷ್ಯ ರೂಪಿಸಿಕೊಳ್ಳಲು ಬೆಂಗಳೂರಿಗೆ ಬಂದು ಪಿಜಿಯಲ್ಲಿ ಉಳಿಯುವ ಹೆಣ್ಣು ಮಕ್ಕಳ ವಾಸ್ತವ ಚಿತ್ರಣ ಹೇಗಿರುತ್ತೆ? ಪಿಜಿಯಲ್ಲಿ ಆಹಾರ ಸರಿ ಇಲ್ಲದೆ, ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲೀಷ್ ಬಾರದೇ ಏನೆಲ್ಲಾ, ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ಹಾಡೊಂದು ತೆರೆದಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ.

‘ಫೈನಲಿ ನಮ್ಮ ನಂದು’ ಎಂದ ಫ್ಯಾನ್ಸ್​

ಈ ರೀಲ್ಸ್​ನಲ್ಲಿ ರಮ್ಯಾ ‘ನಾನು ನಂದಿನಿ’ ಹಾಡನ್ನು ಹೇಳಿದಂತೆ ತೋರಿಸಲಾಗಿದೆ. ಅಸಲಿಗೆ ರಮ್ಯಾ ಇದಾಗಲೇ ಮಾಡಿರುವ ಯಾವುದೋ ಹಾಡಿನ ಒರಿಜಿನಲ್​ ವಿಡಿಯೋ ಹಾಕಿ ಅದಕ್ಕೆ ಹಿನ್ನೆಲೆಯಾಗಿ ನಾನು ನಂದಿನಿ ಹಾಡನ್ನು ಹೇಳಲಾಗಿದೆ. ವಿಡಿಯೋದಲ್ಲಿ ಲಿಪ್​ ಸಿಂಕ್​ ಆಗದೇ ಇರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ರಮ್ಯಾ ಅವರ ಫ್ಯಾನ್ಸ್ ಪೇಜ್​ನಲ್ಲಿ ಈ ವಿಡಿಯೋ ಶೇರ್​ ಆಗಿದ್ದು, ‘ಫೈನಲಿ ನಮ್ಮ ನಂದು’ ಅಂದು ಬರೆದಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬರುತ್ತಿದ್ದು, ಇವ್ಳು ನಮ್ಮ ನಂದು ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ.

Exit mobile version