Site icon PowerTV

ಬಾಲಕನ ಮೇಲೆ ಮಸೀದಿ ಮೌಲ್ವಿಯಿಂದಲೇ ಲೈಂಗಿಕ ದೌರ್ಜನ್ಯ

ಕಾರವಾರ : ಬಾಲಕನ ಮೇಲೆ ಮಸೀದಿಯ ಮೌಲ್ವಿಯಿಂದಲೇ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ನಡೆದಿದೆ.

ಮೌಲಾನ ಅಬ್ಬುಸ್ ಸಮದ್ ಜಿಯಾಯಿ(25) ಲೈಂಗಿಕ ದೌರ್ಜನ್ಯವೆಸಗಿದ ಮೌಲ್ವಿ. ಈತ ಪಶ್ಚಿಮ ಬಂಗಾಳ ಮೂಲದವನು. ಬಾಲಕನ ತಂದೆ ನೀಡಿದ ದೂರಿನನ್ವಯ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮೌಲ್ವಿಯನ್ನು ವಶಕ್ಕೆ ಪಡೆದಿದ್ದಾರೆ.

ಬಾಲಕ ಖುರಾನ್ ಓದಲು ಮಸೀದಿಗೆ ಬರುತ್ತಿದ್ದ ವೇಳೆ ಆತನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಎಂದಿನಂತೆ ಸೆಪ್ಟಂಬರ್ 23ರ ರಾತ್ರಿ 8 ಗಂಟೆಗೆ ಖುರಾನ್ ಓದಲು ಬಾಲಕ ಮಸೀದಿಗೆ ತೆರಳಿದ್ದನು. ಈ ವೇಳೆ ಬಾಲಕನ ಬಟ್ಟೆ ಬಿಚ್ಚಿಸಿ ಗುಪ್ತಾಂಗ ಸ್ಪರ್ಶಿಸಿ ಮೌಲ್ವಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕನ ತಂದೆ ಆರೋಪಿಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.

Exit mobile version