Site icon PowerTV

ವಿಕ್ರಮ್, ಪ್ರಜ್ಞಾನ್ ಬಗ್ಗೆ ಇಸ್ರೋದಿಂದ ಅಚ್ಚರಿ ಘೋಷಣೆ

ಬೆಂಗಳೂರು : ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಜ್ಞಾನ್​ ಅನ್ನು ಸ್ಲೀಪಿಂಗ್(ನಿದ್ದೆ) ನಿಂದ ಎಚ್ಚರಗೊಳಿಸುವ ಬಗ್ಗೆ ಇಸ್ರೋ ಮತ್ತೊಂದು ಮಾಹಿತಿ ನೀಡಿದೆ.

ವಿಕ್ರಮ್ ಲ್ಯಾಂಡರ್​ನಲ್ಲಿರುವಕೆಲವು ಸರ್ಕ್ಯೂಟ್​ಗಳನ್ನು ಬಂದ್ ಆಗಲು(ಮಲಗಲು) ನಾವು ಬಿಡಲಿಲ್ಲ. ಅವು ಎಚ್ಚರವಾಗಿಯೇ ಇದ್ದವು. ಇಲ್ಲಿಂದ ನಿರಂತರ ಸಂಪರ್ಕಕ್ಕೆ ಯತ್ನಿಸಲಾಗುತ್ತಿದ್ದು, ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎಂದಿದೆ.

ಅಲ್ಲದೆ, ನಾವು ಆತಂಕ ಪಡುವ ಅಗತ್ಯವಿಲ್ಲ. ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಜ್ಞಾನ್ ಸ್ವಯಂಚಾಲಿತವಾಗಿ ಎಚ್ಚರ(ಆನ್)ಗೊಳ್ಳುತ್ತವೆ ಎಂದು ಇಸ್ರೋ ಮಾಹಿತಿ ನೀಡಿದೆ.

Exit mobile version