Site icon PowerTV

ಗಣೇಶೋತ್ಸವ ಹೆಸರಲ್ಲಿ ಮದ್ಯದ ಬಾಟಲಿಯ ಲಕ್ಕಿ ಕೂಪನ್

ಮಂಗಳೂರು : ಗಣೇಶೋತ್ಸವ ಹೆಸರಲ್ಲಿ ಯುವಕನೊಬ್ಬ ಮದ್ಯದ ಬಾಟಲಿಯ ಲಕ್ಕಿ ಕೂಪನ್ ಬಹುಮಾನ ಇಟ್ಟಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಳೆಗೇಟು ಬಳಿ ನಡೆದಿದೆ.

ಗಣೇಶ ಹಬ್ಬದ ಪ್ರಯುಕ್ತ ಹಳೆಗೇಟು ಬಳಿ ಗಣೇಶೋತ್ಸವ ನಡೆದಿತ್ತು. ಯುವಕನೊಬ್ಬ ಗಣೇಶೋತ್ಸವ ಹೆಸರಿನಲ್ಲಿ ಲಕ್ಕಿ ಚೀಟಿಯಲ್ಲಿ ಬ್ಲ್ಯಾಕ್ ಆಂಡ್ ವೈಟ್ ಮದ್ಯ ಹಾಗೂ ಒಂದು ಕೇಸ್ ಬಿಯರ್ ಬಹುಮಾನವಾಗಿ ಇಟ್ಟಿದ್ದನು.

ಇದನ್ನು ಓದಿ : ಜೆಡಿಎಸ್​ ಸೇರ್ಪಡೆಯಿಂದ ಬಿಜೆಪಿಗೆ ದೊಡ್ಡ ಬಲ ಬಂದಿದೆ: ಬಿಎಸ್​ವೈ

ಈ ಹಿನ್ನೆಲೆ ಲಕ್ಕಿ ಕೂಪನ್ ಬಗ್ಗೆ ಸುಳ್ಯ ಪರಿಸರದಲ್ಲಿ ವಿರೋಧ ವ್ಯಕ್ತವಾಗಿದ್ದು, ಹಿಂದೂ ಧರ್ಮದ ಹಬ್ಬದಲ್ಲಿ ಮದ್ಯದ ಲಕ್ಕಿ ಕೂಪನ್ ಮಾಡಿದ್ದಕ್ಕೆ ಜಾಲತಾಣದಲ್ಲೂ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಂಬಂಧ ಲಕ್ಕಿ ಕೂಪನ್ ಮಾಡಿದ್ದ ಯುವಕನನ್ನು ಪತ್ತೆ ಹಚ್ಚಿ ಈಗಾಗಲೇ ವಿಚಾರಣೆಯನ್ನು ಶುರು ಮಾಡಿದ್ದಾರೆ.

ಬಳಿಕ ವಿಚಾರಣೆ ವೇಳೆ ಯುವಕ ತಪ್ಪು ಒಪ್ಪಿಜಕೊಂಡಿದ್ದು, ಇನ್ನೂ ಮುಂದೆ ತಪ್ಪು ಆಗದಂತೆ ಕ್ಷಮೆಯನ್ನು ಕೇಳಿದ್ದಾನೆ. ಸುಳ್ಯ ಪೋಲಿಸ್ ಠಾಣೆಗೆ ಯುವಕನ ಕರೆದು ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ.

Exit mobile version