Site icon PowerTV

ತಮಿಳುನಾಡಿಗೆ ನೀರು ಹರಿಸೋದೇ ಇವರ ಸಾಧನೆ; ಅಶ್ವಥ್ ನಾರಾಯಣ್

ಬೆಂಗಳೂರು : ಕಾವೇರಿ ವಿಚಾರದ ಹಿನ್ನೆಲೆ ಯಾವುದೇ ಕಾರಣಕ್ಕೂ ನೀವು ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ ಎಂದು ಡಿಕೆ ಶಿವಕುಮಾರ್ ಅವರ ವಿರುದ್ಧ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಜಿ ಪರಿಷತ್ ಸದಸ್ಯ ಅಶ್ವಥ್ ನಾರಾಯಣ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಅವರು ಬ್ರಾಂಡ್ ಬೆಂಗಳೂರು ಎಂದು ಡಿಕೆ ಶಿವಕುಮಾರ್ ಬೆಂಗಳೂರಲ್ಲಿ ರೋಲ್ ಕಾಲ್ ಮಾಡ್ಕೊಂಡು ಕೂತಿದ್ದಾರೆ. ಆದರೆ ಕೋರ್ಟ್​ಗೆ ಕಾವೇರಿ ನೀರಿನ ಬಗ್ಗೆ ಮನವರಿಕೆ ಮಾಡಿಕೊಟ್ಟಿಲ್ಲ ಎಂದು  ಹೇಳಿದ್ದಾರೆ.

ಇದನ್ನು ಓದಿ : SSLC, ದ್ವಿತೀಯ PUC ವಾರ್ಷಿಕ-3 ಪರೀಕ್ಷೆಯ ಮಾರ್ಗಸೂಚಿ ಪ್ರಕಟ

ತಮಿಳುನಾಡಿಗೆ ಸರ್ಕಾರದ ಜೊತೆ ಡಿಕೆ ಶಿವಕುಮಾರ್ ಒಳ ಒಪ್ಪಂದ ಮಾಡ್ಕೊಂಡು ಕೂತಿದ್ದಾರೆ. ಯಾವುದೇ ಕಾರಣಕ್ಕೂ ಡಿಕೆ ಅವರು ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ. ಮೇಕೆದಾಟು ಪಾದಯಾತ್ರೆ ಮಾಡಿದ್ರಲ್ಲ, ಮೇಕೆದಾಟು ಯೋಜನೆ ಜಾರಿ ಮಾಡಿ. ಆದರೆ ಇವಾಗ ಡಿಕೆ ಶಿವಕುಮಾರ್ ಮೇಕೆದಾಟುವಿನ ಬಗ್ಗೆ ಮಾತಾಡೋದೆ ಇಲ್ಲ ಎಂದು ಹೇಳಿದ್ದಾರೆ.

ಡಿಕೆ ಶಿವಕುಮಾರ್ ಮೊದಲು ರಾಜೀನಾಮೆ ಕೊಡಬೇಕು, ರಾಜ್ಯದ ಜನತೆಗೆ ಸಿದ್ಧರಾಮಯ್ಯ ದ್ರೋಹ ಮಾಡಿದ್ದಾರೆ. ಇವರಿಗೆಲ್ಲ ನೀರಿನ ಬಗ್ಗೆ ಯೋಚನೆ ಇಲ್ಲ, ಭಾಗ್ಯಗಳ ಬಗ್ಗೆ ಇವ್ರು ಕಾಲ ಹರಣ ಮಾಡ್ತಿದ್ದಾರೆ. ಈ ಸರ್ಕಾರಕ್ಕೆ ತಮಿಳುನಾಡಿಗೆ ನೀರು ಹರಿಸೊದೇ ಇವರ ಸಾಧನೆಯಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಅಶ್ವಥ್​ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.

Exit mobile version