Site icon PowerTV

ಅಮೃತ್ ನೋನಿ ಕುರಿತು ಸೂರ್ಯಕುಮಾರ್ ಯಾದವ್ ಪೋಸ್ಟ್

ಬೆಂಗಳೂರು : ಅಮೃತ್‌ ನೋನಿ ಕರ್ನಾಟಕದ ಹೆಮ್ಮೆಯ ಆಯುರ್ವೇದಿಕ್ ಬ್ರ್ಯಾಂಡ್ ಆಗಿದೆ. ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್‌ ಯಾದವ್, ಅಮೃತ್‌ನೋನಿ ಕುರಿತು ಇನ್ಸ್ಟಾಗ್ರಾಂನಲ್ಲಿ ಮಾಡಿದ ಪೋಸ್ಟ್ ಇದೀಗ ವೈರಲ್‌ ಆಗಿದೆ.

‘ಅಮೃತ್‌ ನೋನಿ ಪೇನ್‌ ರಿಲೀಫ್‌ ಸ್ಪ್ರೇ’ ಯ ರಾಯಭಾರಿಯಾಗಿ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಮೃತ್‌ ನೋನಿ ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಗುಣಮಟ್ಟದ ಆಯುರ್ವೇದಿಕ್‌ ಉತ್ಪನ್ನಗಳ ಬ್ರ್ಯಾಂಡ್‌ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ‘ಅಮೃತ್‌ ನೋನಿ ಪೇನ್‌ ರಿಲೀಫ್‌ ಸ್ಪ್ರೇ’ ಕುರಿತು ಪೋಸ್ಟ್‌ ಮಾಡಿರುವ ಸೂರ್ಯಕುಮಾರ್, ಅಮೃತ್‌ನೋನಿ ಕುಟುಂಬದ ಭಾಗವಾಗಲು ನನಗೆ ಸಂತೋಷವಾಗುತ್ತಿದೆ. ತ್ವರಿತ ನೋವು ನಿವಾರಣೆ ಅಂತ ಬಂದಾಗ ನಾನು ‘ಅಮೃತ್‌ ನೋನಿ ಪೇನ್‌ ರಿಲೀಫ್‌ ಸ್ಪ್ರೇ’ಯನ್ನೇ ಹೆಚ್ಚು ನಂಬುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರ ಪೋಸ್ಟ್‌ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಲಕ್ಷಾಂತರ ಜನರು ಶೇರ್‌ ಮಾಡುತ್ತಿದ್ದಾರೆ.

Exit mobile version