Site icon PowerTV

ಇಂದು ನೇರಳೆ ಮಾರ್ಗ ಮೆಟ್ರೋ ರೈಲು ಸಂಚಾರ ವ್ಯತ್ಯಯ!

ಬೆಂಗಳೂರು : ಮೆಟ್ರೋ ಹೊಸ ಮಾರ್ಗದ ಸುರಕ್ಷತೆ ಪರಿಶೀಲನೆ ಹಿನ್ನೆಲೆ ನೇರಳೆ ಮಾರ್ಗದ ವಿವಿಧ ನಿಲ್ದಾಣಗಳಲ್ಲಿ ಸಂಚಾರ ವ್ಯತ್ಯಯವಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಬೈಯಪ್ಪನಹಳ್ಳಿಯಿಂದ ಕೆಆರ್‌ ಪುರ ಮೆಟ್ರೋ ನಿಲ್ದಾಣದ ನಡುವಿನ ಹೊಸ ಮಾರ್ಗದ ಸುರಕ್ಷತೆ ಪರೀಶಿಲನೆ ನಡೆಯುತ್ತಿರುವ ಹಿನ್ನೆಲೆ ಇಂದು ನೇರಳೆ ಮಾರ್ಗದಲ್ಲಿ ವಿವಿಧ ನಿಲ್ದಾಣಗಳಲ್ಲಿ ಮೆಟ್ರೋ ರೈಲಿನ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಕೆಆರ್ ಪುರದಿಂದ ಗರುಡಾಚಾರ್​ಪಾಳ್ಯ ಹಾಗೂ ಬೈಯಪ್ಪನಹಳ್ಳಿಯಿಂದ ಎಂದಿರಾನಗರ ನಿಲ್ದಾಣದವರೆಗೂ ಮೆಟ್ರೋ ರೈಲು ಸಂಚಾರ ವ್ಯತ್ಯಯವಾಗಿದೆ. ಇನ್ನೂ ಬೈಯಪ್ಪನಹಳ್ಳಿಯಿಂದ ಇಂದಿರಾನಗರ ಮೆಟ್ರೋ ನಿಲ್ದಾಣದವರೆಗೂ ಮಧ್ಯಾಹ್ನ 1.30 ರಿಂದ ಸಂಜೆ 4.30 ರವರೆಗೆ ಸಂಚಾರಿಸುತ್ತಿದ್ದ, ಮೆಟ್ರೋ ರೈಲು ಇಂದು ಸೇವೆ ಲಭ್ಯವಿಲ್ಲ.

ಇದನ್ನು ಓದಿ : ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸುಪ್ರೀಂ ಆದೇಶ!

ಇನ್ನೂ ವೈಟ್​ಫೀಲ್ಡ್ ಮತ್ತು ಗರುಡಾಚಾರ್​ಪಾಳ್ಯದ ನಡುವೆ ಎಂದಿನಂತೆ ಮೆಟ್ರೋ ರೈಲುಗಳು ಸಂಚರಿಸಲಿವೆ. ಇಂದಿರಾನಗರ ಮತ್ತು ಕೆಂಗೇರಿ ನಡುವೆ ಮಧ್ಯಾಹ್ನ 1.30 ರಿಂದ ಸಂಜೆ 4.30ರವರೆಗೆ ರೈಲು ಸೇವೆ ಲಭ್ಯವಿದ್ದು, ಹಸಿರು ಮಾರ್ಗದ ರೈಲು ಸೇವೆ ವ್ಯತ್ಯಯ ಇಲ್ಲ. ಮಧ್ಯಾಹ್ನ 1.30ವರೆಗೆ ಮತ್ತು ಸಂಜೆ 4.30ರ ನಂತರ ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ರೈಲುಗಳು ಎಂದಿನಂತೆ ಸಂಚರಿಸಲಿವೆ.

Exit mobile version