Site icon PowerTV

ಆಟೋ ಚಾಲಕನ ಮೇಲೆ ಟಿಪ್ಪರ್ ಹರಿದು ಚಾಲಕ ಸಾವು

ಕೋಲಾರ : ಆಟೋ ಚಾಲಕನ ಮೇಲೆ ಟಿಪ್ಪರ್ ಹರಿದು ಚಾಲಕ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಮಡೇರಹಳಗಳಿ ಗೇಟ್ ಬಳಿ ನಡೆದಿದೆ.

ಸೂಲೂರು ಗ್ರಾಮದ ನಿವಾಸಿ ಧನುಷ (29) ಮೃತ ದುರ್ದೈವಿ. ಎಂಬ ಯುವಕ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ. ಇಂದು ರಾಷ್ಟ್ರೀಯ ಹೆದ್ದಾರಿ 75ರ ಮಡೇರಹಳಗಳಿ ಗೇಟ್​ ಬಳಿ ಆಟೋ ನಿಲ್ಲಿಸಿಕೊಂಡು ನಿಂತಿದ್ದರು.  ವೇಳೆ, ಚಾಲಕನಿಗೆ ಹಿಂಬದಿಯಿಂದ ಬಂದು ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದು ಚಾಲಕನ ಮೇಲೆ ಹರಿದು ಹೋಗಿದೆ

ಇದನ್ನು ಓದಿ : ನಿರ್ಮಾಣ ಹಂತದ ಮನೆಯ ಮೇಲಿಂದ ಬಿದ್ದು ಯುವಕ ಸಾವು

ಈ ವೇಳೆ ಚಾಲಕನಿಗೆ ಹಿಂಬದಿಯಿಂದ ಬಂದು ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದು, ಚಾಲಕನ ಮೇಲೆ ಹರಿದು ಹೋಗಿದ್ದು, ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಚಾಲಕನ ಮೃತದೇಹ ರಸ್ತೆಯ ಮೇಲೆಯೇ ನಜ್ಜು ಗುಜ್ಜು ಆಗಿ ಬಿದ್ದಿತ್ತು.

ಈ ಅಪಘಾತ ನಡೆಯುತ್ತಿದ್ದಂತೆ ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Exit mobile version