Site icon PowerTV

ಸೂಟ್ ಕೇಸ್​ ತಲೆಯ ಮೇಲೆ ಹೊತ್ತ ರಾಹುಲ್ ಗಾಂಧಿ: ವಿಡಿಯೋ ವೈರಲ್​!

ನವದೆಹಲಿ : ದೆಹಲಿಯ ಆನಂದ ವಿಹಾರ್ ರೈಲು ನಿಲ್ದಾಣದಲ್ಲಿ ಇಂದು (ಗುರುವಾರ) ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಇಲ್ಲಿನ ಕೂಲಿಗಳೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗಳನ್ನು ಆಲಿಸಿದರು.

ಈ ವೇಳೆ ಕೂಲಿಗಳಂತೆ ಕೆಂಪು ಅಂಗಿ ಧರಿಸಿದ್ದ ಅವರು, ಸೂಟ್‌ಕೇಸ್ ಅನ್ನು ತಲೆ ಮೇಲೆ ಹೊತ್ತುಕೊಂಡಿರುವ ಹಾಗೂ ನೆಲದ ಮೇಲೆ ಕುಳಿತು ಸಮಸ್ಯೆ ಆಲಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದೆ.

ಜನರ ನಾಯಕ ರಾಹುಲ್ ಗಾಂದಿ ಅವರು ದೆಹಲಿ ಆನಂದ್‌ ವಿಹಾರ್ ರೈಲು ನಿಲ್ದಾಣದಲ್ಲಿ ಇಂದು ಕೂಲಿ ಸ್ನೇಹಿತರನ್ನು ಭೇಟಿಯಾದರು. ಕೂಲಿ ಸ್ನೇಹಿತರೊಬ್ಬರು ರೈಲು ನಿಲ್ದಾಣದ ಸ್ಥಿತಿಗತಿ ಕುರಿತು ಬೇಸರ ವ್ಯಕ್ತಪಡಿಸಿದ್ದ ಹಾಗೂ ರಾಹುಲ್ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಕುರಿತು ಕಾಂಗ್ರೆಸ್ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದೆ.

 

Exit mobile version