Site icon PowerTV

ನಟರ ‘ಕಾವೇರಿ’ ಆಕ್ರೋಶ ಜಾಲತಾಣಕ್ಕಷ್ಟೇ ಸೀಮಿತನಾ?

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದಕ್ಕೆ ಸ್ಯಾಂಡಲ್​ವುಡ್​ ನಟ-ನಟಿಯರು ಪ್ರತಿಕ್ರಿಯಿಸಿಲ್ಲವೆಂದು ಆಕ್ರೋಶ ಭುಗಿಲೇಳ್ತಿದ್ದಂತೆ ಸಮರೋಪಾದಿಯಲ್ಲಿ ಪ್ರತಿಕ್ರಿಯೆ ಹರಿದು ಬಂದಿತ್ತು. ಆದರೆ, ಈ ಪ್ರತಿಕ್ರಿಯೆ ಕೇವಲ ಹೇಳಿಕೆಗಳಾಗೆ ಉಳಿದಿದ್ದು, ಕಾರ್ಯರೂಪಕ್ಕೆ ಬಂದಿಲ್ಲ.

ಸ್ಯಾಂಡಲ್‌ವುಡ್​ ಸ್ಟಾರ್ಸ್ ಕೇವಲ ಟ್ವೀಟ್ ಮಾಡಿ ಕೈ ತೊಳೆದುಕೊಂಡಿದ್ದಾರೆ. ಕನ್ನಡದ ಸಿನಿಮಾ ನಟರ ಆಕ್ರೋಶ ಕೇವಲ ಸಾಮಾಜಿಕ ಜಾಲತಾಣಕ್ಕಷ್ಟೇ ಸೀಮಿತವಾಗಿದೆ. ಯಾರೂ ಬೀದಿಗಿಳಿದು ಹೋರಾಟ ಮಾಡ್ತೇವೆ ಎನ್ನುವ ಮಾತುಗಳನ್ನ ಆಡಿಲ್ಲ.

ಇದನ್ನೂ ಓದಿ: ಕಾವೇರಿ ವಿಚಾರ: ಮೌನ ಮುರಿದ ನಟ ಶಿವರಾಜ್​ ಕುಮಾರ್​!

ಒಂದು ಕಡೆ ಬೇಗ ನ್ಯಾಯ ಸಿಗಲಿ ಎಂದು ನಟ ದರ್ಶನ್ ಟ್ವೀಟ್​ ಮಾಡಿದ್ರೆ. ಮತ್ತೊಂದೆಡೆ ಸರ್ಕಾರ ಕಾವೇರಿ ನಂಬಿದ ಜನರನ್ನ ಕೈಬಿಡಲ್ಲ ಎಂದು ನಟ ಕಿಚ್ಚ ಸುದೀಪ್​​​ ಹೇಳಿದ್ದಾರೆ. ಇನ್ನೂ ಕೋಟ್ಯಂತರ ಜನರಿಗೆ ನ್ಯಾಯ ಕೊಡಿಸಬೇಕೆಂದು ನಟ ಅಭಿಷೇಕ್ ಆಗ್ರಹಿಸಿದ್ದಾರೆ. ಆದರೆ ಯಾವ ನಟರೂ ಸಹ ಹೋರಾಟಕ್ಕೆ ಧುಮುಕಿಲ್ಲ.

ನಮ್ಮ ನಟರಿಗೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ ಮುಳುವಾಯಿತಾ ಎಂಬ ಅನುಮಾನ ಮೂಡಿದೆ. ತಮಿಳುನಾಡು ವಿರುದ್ಧ ಹೇಳಿಕೆ ನೀಡಿದ್ರೆ ಸಿನಿಮಾ ಬ್ಯಾನ್ ಆಗುವ ಭೀತಿ ಶುರುವಾಗಿದ್ಯಾ ಎಂಬ ಅನುಮಾನ ಸಹ ಮೂಡಿದೆ.

Exit mobile version