Site icon PowerTV

ಕಾವೇರಿ ವಿವಾದ: ಸುಪ್ರೀಂ​ CWMA ಆದೇಶ ಎತ್ತಿಹಿಡಿದಿರುವುದು ಖಂಡನೀಯ: ಬೊಮ್ಮಾಯಿ

ಬೆಂಗಳೂರು : ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್​ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಎತ್ತಿಹಿಡಿದಿರುವುದು ದುರಾದೃಷ್ಟಕರ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟಿಗೆ ವಸ್ತುಸ್ಥಿತಿಯನ್ನ ತಿಳಿಸಲು ಮತ್ತೊಮ್ಮೆ ವಿಫಲವಾಗಿದೆ. ಮೊದಲನೇ ಆದೇಶ ಬಂದಾಗಲೇ ಕೋರ್ಟ್ ಗೆ ಹೋಗಬೇಕಿತ್ತು ಆದರೇ,
ಇನ್ನೂ ಕೂಡ ಕೈ ಹಾಕಿಲ್ಲ, ಸುಪ್ರೀಂ ಕೋರ್ಟ್​ನ ಎರಡು ಆದೇಶ ಪಾಲನೆ ಮಾಡಿ ತಮಿಳುನಾಡಿಗೆ ನೀರನ್ನು ಹರಿಸಿದ್ದಾರೆ, ಈಗ ಮೂರನೇ ಬಾರಿಗೆ ಅಫಿಡವಿಟ್ ಹಾಕ್ಕೊಂಡು ಕೂತಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ನಾಡು, ನುಡಿ, ಭಾಷೆ ವಿಚಾರದಲ್ಲಿ ಜನರ ಜೊತೆ ಸದಾ ಇರುತ್ತೇವೆ: ರಾಘವೇಂದ್ರ ರಾಜ್​ ಕುಮಾರ್​!

ಈ ಕಾಂಗ್ರೆಸ್​ ಸರ್ಕಾರಕ್ಕೆ ನಾವು ಪದೇ ಪದೇ ಹೇಳಿದ್ರೂ ಗಂಭೀರವಾಗಿ ತೆಗೆದುಕೊಂಡಿಲ್ಲ CWRC, CWMA ಆದೇಶವನ್ನು ಅನುಸಿರೋದು ಸರಿಯಿಲ್ಲ, ಅಲ್ಲಿ ಸಂಪೂರ್ಣವಾಗಿ ಟೆಕ್ನಿಕಲ್ ಮಾಹಿತಿ ಇರುತ್ತೆ
ನ್ಯಾಯಾಧಿಕಾರಣ ಮಾನದಂಡವೂ ಇದೆ.

CWC ಯಲ್ಲಿ ನಮ್ಮ ಸರ್ಕಾರ ಸರಿಯಾಗಿ ವಾದ ಮಂಡನೆ ಮಾಡಿಲ್ಲ, ಹೀಗಾದ್ರೆ ರಾಜ್ಯದ ಹಿತ ಹೇಗೆ ಸ್ವಾಮಿ..?
ತಮಿಳುನಾಡು ಸರ್ಕಾರ ಕುರುವೈ ಬೆಳೆಯ ಎರಡನೇ ಬೆಳೆಗೆ ನೀರು ಕೇಳ್ತಿದ್ದಾರೆ. ಆದರೇ, ಇಲ್ಲಿ‌ಕುಡಿಯೋಕೆ ನೀರಿಲ್ಲ ಗ್ರೌಂಡ್ ರಿಯಾಲಿಟಿಯನ್ನ ಪರಿಗಣಿಸಿಲ್ಲ, ಇದು ಖಂಡನೀಯ ಎಂದು ಸುಪ್ರೀಂ ಕೋರ್ಟ್​ ಆದೇಶದ ವಿರುದ್ದ ಅನಮದಾನ ವ್ಯಕ್ತಪಡಿಸಿದ್ದಾರೆ.

Exit mobile version