Site icon PowerTV

ಪೊರಕೆಯಿಂದ ಹೊಡೆದು ಜಾತಿ ನಿಂದನೆ ಆರೋಪ; ಯುವಕ ಆತ್ಮಹತ್ಯೆ

ಕೋಲಾರ : ಜಾತಿ ನಿಂದನೆ ಆರೋಪದ ಹಿನ್ನೆಲೆ ಪೊರಕೆಯಿಂದ ಹೊಡೆದ ಪರಿಣಾಮ ಹಲ್ಲೆಗೊಳಗಾದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಲೂರು ತಾಲೂಕಿನ ಹುರುಳಗೆರೆಯಲ್ಲಿ ನಡೆದಿದೆ.

ಗ್ರಾಮದ ಶ್ರೀನಿವಾಸ್​ (30) ಮೃತ ಯುವಕ. ಎಂಬುವನು ಸ್ನೇಹಿತರ ಜೊತೆ ಮದ್ಯ ಸೇವನೆ ಮಾಡುವಾಗ ತನ್ನ ಸ್ನೇಹಿತ ಅಶೋಕ ಎಂಬುವನ ಪತ್ನಿ ಮಂಜುಳಾ ಬಗ್ಗೆ ಶ್ರೀನಿವಾಸ್ ತಪ್ಪಾಗಿ ಮಾತನಾಡಿದ್ದನು. ಈ ಹಿನ್ನೆಲೆ ಮಂಜುಳಾ ಅವರ ಕುಟುಂಬದವರು ಸೇರಿ ಯುವಕನಿಗೆ ಪೊರಕೆಯಿಂದ ಥಳಿಸಿದ್ದಾರೆ.

ಇದನ್ನು ಓದಿ : ನೀರಿನ ತೊಟ್ಟಿ ಗೋಡೆ ಕುಸಿದು ವಿದ್ಯಾರ್ಥಿ ಸಾವು

ಈ ಪರಿಣಾಮ ಶ್ರೀನಿವಾಸ ಮನನೊಂದಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ಈ ಘಟನಾ ಸಂಬಂಧ ಮೃತನ ಕುಟುಂಬಸ್ಥರು ಅಶೋಕ್, ರಮೇಶ್, ಧರ್ಮೇಂದ್ರ, ಮಂಜುಳಾ ಪರಿಶಿಷ್ಟ ಜಾತಿ ಹೆಸರೇಳಿ ನಿಂದಿಸಿದ್ದಾರೆ. ಹಾಗೂ ಅವನಿಗೆ ಪೊರಕೆಯಿಂದ ಹಲ್ಲೆ ಮಾಡಿದ್ದ ಕಾರಣ ಶ್ರೀನಿವಾಸ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಲೂರು ಪೊಲೀಸ್ ಠಾಣೆಗೆ ಜಾತಿ ನಿಂದನೆ ದೂರು ನೀಡಿದ ಕುಟುಂಬಸ್ಥರು.

ಇನ್ನೂ ಯುವಕನ ಮೃತದೇಹವನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಘಟನಾ ಸಂಬಂಧ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version