Site icon PowerTV

DMK ಸ್ನೇಹಕ್ಕಾಗಿ ಕಾವೇರಿ ನೀರು ಬರಿದು ಮಾಡಿದೆ : ಬಿ.ವೈ ವಿಜಯೇಂದ್ರ

ಶಿವಮೊಗ್ಗ : DMK ಸ್ನೇಹಕ್ಕಾಗಿ ಕಾಂಗ್ರೆಸ್​ ಸರ್ಕಾರ ಕಾವೇರಿ ನೀರು ಬರಿದು ಮಾಡಿದೆ ಎಂದು ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಕುಟುಕಿದ್ದಾರೆ.

ಈ ಕುರಿತು Xನಲ್ಲಿ ಪೋಸ್ಟ್​ ಮಾಡಿರುವ ಅವರು, ಇಂದು ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಆದ  ಬಹುದೊಡ್ಡ ಹಿನ್ನಡೆಗೆ ಕಾಂಗ್ರೆಸ್ ಸರ್ಕಾರ ನೇರ ಹೊಣೆ ಹೊರಬೇಕು ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಪೂರಕವಾಗಿ ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ ತನ್ನ  ತೀರ್ಪನ್ನು ನೀಡುತ್ತದೆ. ಆದರೆ ರಾಜ್ಯ ಸರ್ಕಾರ, ನೀರಾವರಿ ಹಾಗೂ ಕಾನೂನು ಇಲಾಖೆಗಳು ಸರಿಯಾದ ಅಂಕಿ ಅಂಶಗಳನ್ನು ಸಲ್ಲಿಸುವಲ್ಲಿ ವಿಫಲವಾಗಿದೆ. ಸುಪ್ರೀಂ ಕೋರ್ಟ್​ನ ಇಂದಿನ ಆದೇಶ ಗಮನಿಸಿದರೆ ಸರ್ಕಾರ ಸೂಕ್ತ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳದೇ ಕೋರ್ಟ್​ಗೆ ಹೊಗಿರುವುದು ಬಯಲಾಗಿದೆ ಎಂದು ತಿಳಿಸಿದ್ದಾರೆ.

ಜಲಕ್ಷಾಮದ ನಗಾರಿ ಸದ್ದು

ಮಳೆ ಕೊರತೆಯಿಂದಾಗಿ ಕೆರೆ ಕಟ್ಟೆಗಳು ಬರಿದಾಗಿ ಜಲಕ್ಷಾಮದ ಎಚ್ಚರಿಕೆಯ ನಗಾರಿ ಸದ್ದು ಕೇಳಿಬರುತ್ತಿದೆ. ಆದರೂ ತಂಪು ನಿದ್ದೆಯಲ್ಲಿದ್ದ ಕಾಂಗ್ರೆಸ್ ಸರ್ಕಾರ, ಹೆಗಲ ಮೇಲೆ ಕೈ ಇಟ್ಟಿದ್ದ DMK ಸ್ನೇಹ ಎಲ್ಲಿ ಜಾರಿ ಬಿಡುವುದೋ ಎಂಬ ಆತಂಕದಲ್ಲಿ ಕಾವೇರಿ ನೀರು ಬರಿದು ಮಾಡಿ ಕುಳಿತಿದೆ. ಬಿಟ್ಟಿ ಜಾತ್ರೆಗಳ ಗಮ್ಮತ್ತಿನಲ್ಲಿ ಮೈ ಮರೆತ ಸರ್ಕಾರ ಕೊನೆಗೆ ನ್ಯಾಯಾಲಯದ ಕಟೆ ಕಟೆಯಲ್ಲಾದರೂ ಈ ನಾಡಿನ ಮಣ್ಣಿನ ಮಕ್ಕಳ ಹಿತಕಾಯದೇ ಕುಡಿಯುವ ನೀರಿಗೂ ಹಾಹಾಕಾರದ ಪರಿಸ್ಥಿತಿ ತಂದೊಡ್ಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Exit mobile version