Site icon PowerTV

ನಿರ್ಮಾಣ ಹಂತದ ಮನೆಯ ಮೇಲಿಂದ ಬಿದ್ದು ಯುವಕ ಸಾವು

ರಾಯಚೂರು : ನಿರ್ಮಾಣ ಹಂತದ ಮನೆಯ ಮೇಲಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ನಗರದ ತಿಮ್ಮಾಪುರ ಪೇಟೆ ಬಡಾವಣೆಯಲ್ಲಿ ನಡೆದಿದೆ.

ರಾಯಚೂರಿನ ಭರತ್ ನಗರದ ನಿವಾಸಿ ರಮೇಶ್ (19) ಎಂಬ ಯುವಕ ಪಿಯುಸಿ ಮುಗಿಸಿ ಗಾರೆ ಕೆಲಸವನ್ನು ಮಾಡುತ್ತ ಇದ್ದನು. ಗಣೇಶ ಹಬ್ಬದ ಹಿನ್ನೆಲೆ ಸ್ನೇಹಿತನ ಮನೆಗೆಂದು ತಿಮ್ಮಾಪುರ ಪೇಟೆ ಬಡಾವಣೆಗೆ ಬಂದಿದ್ದನು. ಈ ವೇಳೆ ರಾತ್ರಿ ಸ್ನೇಹಿತನ ಜೊತೆ ಮನೆಯ ಮೇಲೆ ಮಲಗಿಕೊಂಡಿದ್ದರು.

ಇದನ್ನು ಓದಿ : ಕಟ್ಟಡ ಮೇಲಷ್ಟೇ ಅಲ್ಲ ನಿಮ್ಮೆದೆಯಲ್ಲೂ ಸಂವಿಧಾನ ಕಾಪಾಡಿಕೊಳ್ಳಿ; ಹೆಚ್ ಸಿ ಮಹದೇವಪ್ಪ

ಈ ವೇಳೆ ಅದು ನಿರ್ಮಾಣ ಹಂತದ ಮನೆಯಾಗಿದ್ದು, ಮೇಲಿಂದ ಬಿದ್ದು ಯುವಕ ರಮೇಶ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ನೇತಾಜಿ ನಗರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಯುವಕನ ಮೃತ ದೇಹವನ್ನು ಶವ ಪರಿಕ್ಷೇಗಾಗಿ ನಗರದ ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

Exit mobile version