Site icon PowerTV

ಭಯಾನಕ ಹಿಟ್ ಆ್ಯಂಡ್ ರನ್ ಕೇಸ್ ; ಬಾಲಕ ಸಾವು

ಬೆಂಗಳೂರು : ರಸ್ತೆ ದಾಟುತ್ತಿದ್ದ ವೇಳೆ ಬಾಲಕನಿಗೆ ವೇಗವಾಗಿ ಬಂದು ಕಾರವೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ನಗರದ ಬಾಗಲೂರು ಮುಖ್ಯ ರಸ್ತೆಯಲ್ಲಿ ನಡೆದಿದೆ.

ಭಾನುವಾರ ರಾತ್ರಿ 11.30 ರ ಸಮಯದ ವೇಳೆ ಮೂವರು ಬಾಲಕರು ಬಾಗಲೂರು ಮುಖ್ಯ ರಸ್ತೆಯಲ್ಲಿ ರಸ್ತೆ ದಾಟಲು ಮುಂದಾಗಿದ್ದರು. ಈ ವೇಳೆ ಒರ್ವ ಬಾಲಕನಿಗೆ ಕಾರವೊಂದು ಅತೀ ವೇಗದಲ್ಲಿ ಬಂದು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬಾಲಕ ಹಾರಿ ಬಿದ್ದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಇದನ್ನು ಓದಿ : ಪಾಕಿಸ್ತಾನದ ಲಾಹೋರಿನಲ್ಲಿ ಗಣಪತಿ ಕೂರಿಸ್ತೀವಿ : ಶಾಸಕ ಯತ್ನಾಳ್

ಬಾಲಕನಿಗೆ ಡಿಕ್ಕಿ ಹೊಡೆದು ಕಾರು ಚಾಲಕ ಕಾರ್ ನಿಲ್ಲಿಸದೇ ಪರಾರಿಯಾಗಿದ್ದಾನೆ. ಹಿಟ್ ಆ್ಯಂಡ್ ರನ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್ ಠಾಣೆಗೆ ಬಂದು ಫೇಕ್ ನಂಬರ್ ನೀಡಿದ್ದಾರೆ. ಅದೇ ವೇಳೆ ಹಿಂಬದಿಯಿಂದ ಮತ್ತೊಂದು ಕಾರು ವೇಗವಾಗಿ ಚಲಿಸಿಕೊಂಡು ಹೋಗಿದ್ದು, ಎರಡು ಕಾರಿನವರು ಸ್ನೇಹಿತರಿರಬಹುದು ಅನ್ನೋ ಶಂಕೆ ಇದೆ.

ಈ ಘಟನಾ ಸಂಬಂಧ ಹೆಣ್ಣೂರು ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿರುವ ಪೋಲಿಸರು.

Exit mobile version