Site icon PowerTV

ನವಜಾತ ಶಿಶುವನ್ನ ಬಿಸಾಡಿ ಹೋದ ದುಷ್ಟ ಪೋಷಕರು

ದೊಡ್ಡಬಳ್ಳಾಪುರ : ಹೆಣ್ಣು ಮಗು ಜನಿಸಿದ್ದ ಹಿನ್ನೆಲೆ ಆಗ ತಾನೇ ಹುಟ್ಟಿದ್ದ ನವಜಾತ ಶಿಶುವನ್ನು ಪೊದೆಯಲ್ಲಿ ಬಿಸಾಡಿ ಹೋಗಿರುವ ಘಟನೆ ತಾಲೂಕಿನ ತಿಪ್ಪೂರು ಗ್ರಾಮದ ಸಮೀಪ ನಡೆದಿದೆ.

ತಿಪ್ಪೂರು ಗ್ರಾಮದ ಸಮೀಪದಲ್ಲಿ ಒರ್ವ ಮಹಿಳೆಯಗೆ ಹೆಣ್ಣು ಮಗು ಆಗಿದ್ದ ಹಿನ್ನೆಲೆ ಆಗ ತಾನೇ ಹುಟ್ಟಿದ್ದ, ಹೆಣ್ಣು ಮಗುವನ್ನು ಪೊದೆಯಲ್ಲಿ ಬಿಸಾಡಿ ಹೋಗಿರುವ ದುರುಳ ಪೋಷಕರು. ಬಳಿಕ ಪೊದೆಯಲ್ಲಿ ಬಿಸಾಕಿ ಹೋಗಿದ್ದ ನವಜಾತ ಶಿಶುವನ್ನು ಕಂಡ ದಾರಿಹೋಕರು ನೋಡಿದ್ದಾರೆ.

ಇದನ್ನು ಓದಿ : ಕಾವೇರಿ ವಿಚಾರ: ನಟ ದರ್ಶನ್​ ಟ್ವೀಟ್​ ಪೊಸ್ಟ್​!

ಈ ವೇಳೆ ಮಗುವನ್ನು ಕಂಡ ಕೂಡಲೇ ಅಧಿಕಾರಿಗಳ ಮಾಹಿತಿಯನ್ನು ನೀಡಿದ್ದಾರೆ. ಬಳಿಕ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ಬಳಿಕ ನವಜಾತ ಶಿಶುವನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ ಇರುವೆಗಳು ಮಗುವನ್ನು ಕಚ್ಚಿರುವ ಹಿನ್ನೆಲೆ ಹೆಚ್ಚಿನಿ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಕುರಿತು ಮಗುವು ಎಲ್ಲಿ ಜನಿಸಿದ್ದು ಎಂದು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಂದ ತನಿಖೆ ಮಾಡುತ್ತಿದ್ದಾರೆ.

Exit mobile version