Site icon PowerTV

ವಿರಾಟ್ ಕೊಹ್ಲಿ ಮನೆಯಲ್ಲಿ ಗಣೇಶೋತ್ಸವ ಸಂಭ್ರಮ !

ಮುಂಬೈ : ಎಲ್ಲೆಡೆ ಗಣೇಶೋತ್ಸವ ಸಂಭ್ರಮ ಕಳೆಗಟ್ಟಿದೆ. ಜನಸಾಮಾನ್ಯರಿಂದ ಹಿಡಿದು, ಸಿನಿ ತಾರೆಯರವರೆಗೆ ಎಲ್ಲರೂ ಗಣೇಶೋತ್ಸವದ ಸಂಭ್ರಮದಲ್ಲಿದ್ದಾರೆ. ಇನ್ನು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಕೂಡ ಗಣೇಶನನ್ನು ಪೂಜಿಸಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಇಬ್ಬರೂ ದೈವಭಕ್ತರು. ಉಜ್ಜೈನಿಯ ಮಹಾಕಾಳೇಶ್ವರ ಸೇರಿದಂತೆ ಹಲವು ದೇಗುಲಗಳಿಗೆ ಈಗಾಗಲೇ ದಂಪತಿ ಭೇಟಿ ನೀಡಿದ್ದಾರೆ. ಇದೀಗ ವಿಘ್ನ ನಿವಾರಕನ ಮೊರೆ ಹೋಗಿದ್ದಾರೆ ವಿರುಷ್ಕಾ ದಂಪತಿ!.

ಇದನ್ನೂ ಓದಿ: ‘ಕಾವೇರಿ’ ವಿಚಾರ: ಇಂದು ರಾಜ್ಯದ ಸಂಸದರ ಜೊತೆ ದೆಹಲಿಯಲ್ಲಿ ಸಿಎಂ ಸಭೆ

ಹೌದು, ವಿರಾಟ್ ಕೊಹ್ಲಿ ಮನೆಯಲ್ಲಿ ಸಂಭ್ರಮದಿಂದ ಗಣೇಶೋತ್ಸವ ಆಚರಿಸಲಾಗಿದೆ. ಮುಂಬೈನ ತಮ್ಮ ನಿವಾಸಕ್ಕೆ ಗಣೇಶನನ್ನು ತಂದ ವಿರುಷ್ಕಾ ದಂಪತಿ, ಹಬ್ಬ ಮಾಡಿದ್ದಾರೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಇಬ್ಬರೂ ಸಾಂಪ್ರದಾಯಿಕ ಡ್ರೆಸ್ನಲ್ಲಿ ಮಿಂಚಿದ್ದಾರೆ. ಕೊಹ್ಲಿ ಬಿಳಿ ಕುರ್ತಾ ಧರಿಸಿದ್ದರೆ, ಅನುಷ್ಕಾ ಸೀರೆಯಲ್ಲಿ ಸಂಭ್ರಮಿಸಿದ್ದಾರೆ. ಈ ಫೋಟೋಗಳನ್ನು ಅನುಷ್ಕಾ ಶರ್ಮಾ ತಮ್ಮ ಇನ್ಸ್​ಟಾದಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅನುಷ್ಕಾ “ಹ್ಯಾಪಿ ಗಣೇಶ ಚತುರ್ಥಿ” ಎಂದು ಬರೆದಿದ್ದಾರೆ.

Exit mobile version