Site icon PowerTV

ವಾಟ್ಸಾಪ್‌ ಚಾನೆಲ್ ಆರಂಭಿಸಿದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು : ಜನರೊಟ್ಟಿಗೆ ಸಂಪರ್ಕವನ್ನು ಮತ್ತಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕೃತ ವಾಟ್ಸಪ್‌ ಚಾನೆಲ್‌ ಆರಂಭಿಸಿದ್ದಾರೆ.

ಈ ಮೂಲಕ ದೇಶದ ಸರ್ಕಾರವೊಂದರ ಮುಖ್ಯಸ್ಥರ ಪೈಕಿ ಮೊಟ್ಟಮೊದಲ ವಾಟ್ಸಪ್‌ ಚಾನೆಲ್ ಅನ್ನು ಆರಂಭಿಸಿದ ಹೆಗ್ಗಳಿಕೆಯು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಇನ್ನು ಜನ ಸಂಪರ್ಕ ಸಾಧನೆಯ ನಿಟ್ಟಿನಲ್ಲಿ ಮುಂದಡಿಯಿಟ್ಟವರು ಸಿಎಂ ಸಿದ್ದರಾಮಯ್ಯ ರವರ ನಡೆಗೆ ಪ್ರೇಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬಾಲಕನನ್ನು ಕೊಂದು ತಿಂದಿದ್ದ ಹುಲಿ ಬೋನಿನಲ್ಲಿ ಸೆರೆ!

ಕಳೆದ ವಾರ ವಾಟ್ಸಪ್‌ ಚಾನೆಲ್ ಎಂಬ ಹೊಸ ಆವಿಷ್ಕಾರವನ್ನು ಮೇಟಾ ಕಂಪನಿ ಪರಿಚಯಿಸಿತು. ಸೆಪ್ಟೆಂಬರ್ 12 ರಂದು ಸಿಎಂ ಸಿದ್ದರಾಮಯ್ಯ ಅವರು ಈ ಚಾನಲ್ ಆರಂಭಿಸಿದರು. ಆ ಬಳಿಕ ನಿರಂತರವಾಗಿ ಸಾರ್ವಜನಿಕರು ಚಾನೆಲ್‌ ಸೇರ್ಪಡೆಗೊಳ್ಳುತ್ತಿದ್ದು, ಸದ್ಯ ಮಂಗಳವಾರಕ್ಕೆ 54,000ಕ್ಕೂ ಅಧಿಕ ಮಂದಿ ಈ ಚಾನೆಲ್‌ ಸೇರ್ಪಡೆಯಾಗಿದ್ದಾರೆ.

Exit mobile version