Site icon PowerTV

ಕಾವೇರಿ ನೀರು ವಿಚಾರ: ಸೊಲ್ಲೆತ್ತದ ಸ್ಯಾಂಡಲ್​ವುಡ್​ ನಟ ನಟಿಯರ ವಿರುದ್ದ ಭುಗಿಲೆದ್ದ ಆಕ್ರೋಶ!

ಬೆಂಗಳೂರು : ರಾಜ್ಯದಲ್ಲಿ ಬರದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ  ಆದೇಶದ ವಿರುದ್ದ ರೈತರ ಮತ್ತು ಸರ್ಕಾರ ಕಾನೂನು ಸಮರ ನಡೆಸುತ್ತಿದ್ದರೂ ಸ್ಯಾಂಡಲ್​ವುಡ್​ ನಟ ನಟಿಯರು ಈವರೆಗೂ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಾಗು ಜನತೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ CWMA ಆದೇಶಕ್ಕೆ ನಾವು ಸುಪ್ರೀಂಕೋರ್ಟ್ ಮುಂದೆ ತಡೆಯಾಜ್ಞೆಗೆ ಮನವಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ದೆಹಲಿಯಲ್ಲಿ ಸಿಎಂ, ಡಿಸಿಎಂ ಸೇರಿದಂತೆ ಜನಪ್ರತಿನಿಧಿಗಳು ಸಭೆ ನಡೆಸಿದ್ದಾರೆ. ಇಂದು ಸಂಜೆ ಕೇಂದ್ರ ಜಲ ಸಂಪನ್ಮೂಲ ಸಚಿವರ ಜತೆ ಸಭೆ ನಡೆಸಿದ ಬಳಿಕ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ : ಸುಪ್ರೀಂಕೋರ್ಟ್ ಮುಂದೆ CWMA ಆದೇಶಕ್ಕೆ ನಾವು ತಡೆಯಾಜ್ಞೆ ಕೇಳುತ್ತೇವೆ: ಸಿಎಂ

ರಾಜಕಾರಣಿಗಳ ಪರ ಚುನಾವಣೆಯಲ್ಲಿ ಪ್ರಚಾರಕ್ಕೆ ಇಳಿಯುವ ನಟ ನಟಿಯರು ಕಾವೇರಿ ನೀರಿನ ವಿಚಾರವಾಗಿ ಇದುವರೆಗೂ ಮಾತನಾಡದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ತಮ್ಮ ಸ್ವಾರ್ಥಕ್ಕಾಗಿ ರಾಜ್ಯದ ಹಿತಾಶಕ್ತಿಯನ್ನು ಬಲಿ ಕೊಡುತ್ತಿದ್ದಾರೆ ಮತ್ತು ಸ್ವಾಭಿಮಾನವನ್ನು ಮಾರಿಕೊಂಡಿದ್ದಾರೆ ಎಂದು ರೈತರು ಹಾಗೂ ರೈತ ಪರ ಸಂಘಟನೆಗಳು ನಟರಾದ ಶಿವರಾಜ್​ಕುಮಾರ್​, ಸುದೀಪ್​, ದರ್ಶನ್​ ಮತ್ತು ಯಶ್​ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

Exit mobile version