ಮೈಸೂರು: ಮನೆಯ ಮುಂಭಾಗ ನಿಲ್ಲಿಸಲಾಗಿದ್ದ ಹೋಂಡಾ ಆ್ಯಕ್ಟೀವಾ ಸ್ಕೂಟರ್ ಒಳಗೆ ಹವೊಂದು ನುಸುಳಿದ್ದು ಉರಗ ತಗ್ನ ಹಾವನ್ನು ಹೊರತೆಗೆಯಲು ಹರಸಾಹಸ ಪಟ್ಟ ಘಟನೆ ಮೈಸೂರಿನ ಸಿದ್ದಾರ್ಥ ನಗರದಲ್ಲಿ ನಡೆದಿದೆ.
ಇಲ್ಲಿನ ಸಿದ್ದಾರ್ಥ ನಗರದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದಾಗ ಆ್ಯಕ್ಟಿವಾದಲ್ಲಿ ಉರಗ ತಜ್ಞ ಸೇರಿಕೊಂಡಿರುವುದನ್ನು ಕಂಡ ವಾಹನದ ಮಾಲೀಕ ಉರಗ ತಜ್ಞ ರಮೇಶ್ ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞ ಹಾವನ್ನು ಹೊರ ತೆಗೆಯಲು ಹರಸಾಹಸ ಪಟ್ಟು ಬಳಿಕ ಹಾವಿಗೆ ಯಾವುದೇ ಗಾಯವಾಗದಂತೆ ರಕ್ಷಿಸಿದ್ದಾರೆ.
ಇದನ್ನೂ ಓದಿ: ಸಿಸಿಬಿ ಪೊಲೀಸರಿಂದ ಚೈತ್ರ ಕುಂದಾಪುರ ವಿಚಾರಣೆ!
ಈ ಕುರಿತು ಮಾತನಾಡಿದ ಪ್ರತಿಕ್ರಿಯೆ ನೀಡಿದ ರಮೇಶ್, ಮೈಸೂರಿನಲ್ಲಿ ನಿರಂತರ ಮಳೆ ಹಿನ್ನೆಲೆ ಅಲ್ಲಲ್ಲಿ ಜನ ವಾಸಿಸುವ ಕಡೆಗಳಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಸಹಜ, ಮನೆಯ ಅಂಗಳದಲ್ಲಿ ಸ್ವಚ್ಛತೆ ಕಾಪಾಡಿ. ಹಳೇ ಕಸ, ಡಬ್ಬಿಗಳು ಹಾಗೂ ತ್ಯಾಜ್ಯಗಳನ್ನ ಮನೆ ಮುಂದಿಟ್ಟರೆ ಹಾವು ಕಾಣಿಸಿಕೊಳ್ಳುತ್ತವೆ. ಸ್ವಚ್ಛತೆ ಕಾಪಾಡಿಕೊಂಡರೆ ಹಾವುಗಳು ಬರುದಿಲ್ಲ ಎಂದು ಮನವಿ ಮಾಡಿಕೊಂಡರು.
